ಬುಧವಾರ, ನವೆಂಬರ್ 20, 2019
20 °C

12ರಂದು ಬಂಜಾರರ ಸಮಾವೇಶ

Published:
Updated:

ಹೊಸಪೇಟೆ: ಜೂನ್ 12 ರಂದು ಹೊಸಪೇಟೆಯಲ್ಲಿ ಅಖಿಲ ಭಾರತ ಬಂಜಾರ ಲಂಬಾಣಿ ಸೇವಾ ಸಂಘದ ರಾಜ್ಯ ಮಟ್ಟದ ಸಮಾವೇಶ ನಡೆಯ ಲಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎನ್ ಕಾಂತೇಶ್ ತಿಳಿಸಿದ್ದಾರೆ.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಮಾಜದ ಪ್ರಗತಿಗಾಗಿ ಹಾಗೂ ಜಾಗೃತಿಗಾಗಿ ಸಂಘಟನೆ ಅನು ಸರಿಸಬೇಕಾದ ಕ್ರಮಗಳು, ಸಮಾಜ ವನ್ನು ಕಾಡುತ್ತಿರುವ ಸಮಸ್ಯೆಗಳಾದ ಅನಕ್ಷರತೆ, ಯುವಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗು ವಿಕೆ, ಮತಾಂತರ ಸೇರಿದಂತೆ ಸಾಮಾ ಜಿಕ, ಶೈಕ್ಷಣಿಕ ಪ್ರಗತಿಗೆ ಅನುಸರಿಸ ಬೇಕಾದ ಕ್ರಮಗಳ ಕುರಿತು ಚರ್ಚಿಸಲು ಹಾಗೂ ಸಮಾಜದ ಆರ್ಥಿಕ ಪ್ರಗತಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸಲು ಈ ಸಮಾವೇಶ ಪ್ರಮುಖ ಹೆಚ್ಚೆಯಾಗಲಿದೆ ಎಂದು ತಿಳಿಸಿದರು.ಪಾಲ್ಗೊಳ್ಳಲಿರುವ ಗಣ್ಯರು: ಅಖಿಲ ಭಾರದ ಬಂಜಾರ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಡಾ.ಶಂಕರನಾಯ್ಕ, ರಾಜ್ಯಾಧ್ಯಕ್ಷ ಡಿ.ರಾಮನಾಯ್ಕ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಕೆಲವು ಶಾಸಕರು, ಪ್ರಮುಖರು ಪಾಲ್ಗೊಳ್ಳ ಲಿದ್ದಾರೆ. ವಿಜಯನಗರ ಶಾಸಕ ಆನಂದಸಿಂಗ್ ಸಮಾವೇಶ ಉದ್ಘಾಟಿಸ ುವರು. ಸಮಾಜದ ಅಭಿವೃದ್ಧಿಗಾಗಿ ಪ್ರಮುಖ ಬೇಡಿಕೆಗಳು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳು ಈ ಸಮಾವೇಶ ಕೈಗೊಳ್ಳಲಿದೆ ಎಂದು ಕೆ.ಎನ್.ಕಾಂತೇಶ್ ತಿಳಿಸಿದರು.ಮುಖಂಡರಾದ ಎಲ್.ಡಿ.ಲಕ್ಷ್ಮಣ, ಕೊಟ್ರೇಶ್, ಚಂದ್ರಶೇಖರ, ಶಿವ ರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)