ಮಂಗಳವಾರ, ಜೂನ್ 15, 2021
21 °C
ಉಕ್ರೇನ್‌ ಬಿಕ್ಕಟ್ಟು ಶಮನಕ್ಕೆ ಒಬಾಮ ಚಿಂತನೆ

12ರಂದು ಯತ್ಸೆನ್ಯುಕ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಐಎಎನ್‌ಎಸ್‌): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಉಕ್ರೇನ್‌ನ ಹೊಸ ಅಧ್ಯಕ್ಷ ಅರ್ಸೆನಿ ಯತ್ಸೆನ್ಯುಕ್‌ ಅವರನ್ನು ಬುಧ­ವಾರ ಇಲ್ಲಿ ಭೇಟಿ ಮಾಡಲಿದ್ದಾರೆ. ಈ ಭೇಟಿಯು ಉಕ್ರೇನ್‌ನ ಜನರಿಗೆ ಅಮೆರಿಕದ  ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಲಿದೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.ರಷ್ಯಾ ಸೇನೆಯು ಕ್ರಿಮಿಯಾವನ್ನು ಅತಿಕ್ರಮಿಸಿರುವುದರಿಂದ ಉಂಟಾಗಿ­ರುವ ಬಿಕ್ಕಟ್ಟನ್ನು  ಶಾಂತಿಯುತವಾಗಿ ಬಗೆ­ಹರಿಸಿ­ಕೊಳ್ಳುವ ಮಾರ್ಗೋ­ಪಾ­ಯ­ಗಳ ಬಗ್ಗೆ ಉಭಯ ನಾಯ­ಕರು ಚರ್ಚಿಸ­ಲಿದ್ದಾರೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ಹೇಳಿದೆ.ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ: ಈ ಮಧ್ಯೆ ಬರಾಕ್‌ ಒಬಾಮ ಅವರು ಉಕ್ರೇನ್‌ನ ಪರಿಸ್ಥಿತಿ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್‌ ಅವರೊಂದಿಗೆ ಸೋಮವಾರ ದೂರ­ವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.ಉಕ್ರೇನ್‌ನಲ್ಲಿ ಉದ್ಭವಿಸಿರುವ ಬಿಕ್ಕ­ಟ್ಟು ಪರಿಹರಿಸಲು ಕೈಗೊಳ್ಳುವ ಯಾವುದೇ ಪ್ರಸ್ತಾವಕ್ಕೆ ಚೀನಾದ ಬೆಂಬಲ ಇದೆ ಎಂದು ಜಿಂಪಿಂಗ್‌ ಹೇಳಿದ್ದಾರೆ. ಕೀವ್‌ ವರದಿ: ಪದಚ್ಯುತ ಅಧ್ಯಕ್ಷ ವಿಕ್ಟರ್‌ ಯಾನುಕೋವಿಚ್‌ ಅವಧಿ­ಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಉಕ್ರೇನ್‌ನ ತಂಡಕ್ಕೆ ಎಫ್‌ಪಿಐ ಏಜೆಂಟ್‌ಗಳು ಸೇರಿ­ದಂತೆ ಅಮೆರಿಕದ ಅಧಿಕಾರಿಗಳು ನೆರವು ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.