12ರಿಂದ ಆಕಾಶವಾಣಿ ಹಬ್ಬ

7

12ರಿಂದ ಆಕಾಶವಾಣಿ ಹಬ್ಬ

Published:
Updated:

ಮೈಸೂರು: ಮೈಸೂರು ಆಕಾಶವಾಣಿ ಕೇಂದ್ರವು ಫೆಬ್ರುವರಿ 12 ರಿಂದ 18ರವರೆಗೆ `ಆಕಾಶವಾಣಿ ಹಬ್ಬ~ವನ್ನು ಆಯೋಜಿಸಿದೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಿಲಯ ನಿರ್ದೇಶಕಿ ಡಾ. ಎಂ.ಎನ್ ವಿಜಯಾ, `ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕಲಾವಿದರು, ಕಲಾರಸಿಕರು ಹಾಗೂ ಕಲಾ ಪ್ರಕಾರಗಳ ಸಮನ್ವಯ ಕಾರ್ಯಕ್ರಮ ಇದಾಗಿದೆ. ಮಾಹಿತಿ, ಶಿಕ್ಷಣ, ಮನರಂಜನೆಗಳನ್ನು ಪ್ರಧಾನವಾಗಿಟ್ಟುಕೊಂಡ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ~ ಎಂದರು.`12ರಂದು ಸಂಜೆ 5 ಗಂಟೆಗೆ ಮೈಸೂರು ವಿವಿಯ ಸೆನೆಟ್ ಭವನಲ್ಲಿ ಆಕಾಶವಾಣಿ ಹಬ್ಬವನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಉದ್ಘಾಟಿಸುವರು. 5.30ಕ್ಕೆ ಅರಮನೆ ಸಂಗೀತ ವೈಭವ ಕಾರ್ಯಕ್ರಮದಲ್ಲಿ ಮೈಸೂರು ವಾಗ್ಗೇಯಕಾರರ ಕೃತಿಗಳನ್ನು ಗಾಯನ, ಪಂಚವೀಣಾವಾದನ, ವಾದ್ಯವೃಂದ ಹಾಗೂ ಲಯ ವಿನ್ಯಾಸದ ವಿವಿಧ ಪ್ರಕಾರಗಳಲ್ಲಿ ಆಕಾಶವಾಣಿ ಕಲಾವಿದರು ಪ್ರಸ್ತುತಪಡಿಸುವರು. ಇದಲ್ಲದೇ ಕರ್ನಾಟಕ ಪೊಲೀಸ್ ಬ್ಯಾಂಡ್ ತಂಡವು ವಾದ್ಯವೃಂದ ಕಾರ್ಯಕ್ರಮ ನೀಡಲಿದೆ~ ಎಂದರು.`13ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯಿರುವ ಮಮತೆ ಮಡಿಲು ಕಾರ್ಯಕ್ರಮಕ್ಕೆ ಉದ್ಯಮಿ ಹಾಗೂ ಕಲಾಪೋಷಕ ಕೆ.ವಿ. ಮೂರ್ತಿ ಆಗವಮಿಸುವರು. ಜನಪದ ಮತ್ತು ಸಂಪ್ರದಾಯ ಪದಗಳನ್ನು ಆಧರಿತ ಗೀತರೂಪಕಕ್ಕೆ ಅಕ್ಕರೆ ಸಕ್ಕರೆ ನಡೆಯಲಿದೆ. ನಂತರ ಬೆಳೆಯುವ ಸಿರಿ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ. ಕೊಳ್ಳೆಗಾಲ, ಮಂಡ್ಯ ಮತ್ತು ಶ್ರೀರಂಗಪಟ್ಟಣದ ವಿವಿಧ ಶಾಲೆಯ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ~ ಎಂದು ತಿಳಿಸಿದರು.`14ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಯುವತರಂಗ ಕಾರ್ಯಕ್ರಮದಲ್ಲಿ ನೃತ್ಯರೂಪಕ, ಬೀಸುಕಂಸಾಳೆ, ಜನಪದಗೀತೆಗಳು, ಶಾಸ್ತ್ರೀಯ ನೃತ್ಯ, ಜಡೆಕೋಲಾಟ, ಟ್ವೆಂಟಿಫರ್ಸ್ಟ್ ಸೆಂಚುರಿ ನಾಟಕ ಪ್ರದರ್ಶನವಾಗಲಿವೆ~ ಎಂದರು.`15ರಂದು ಬೆಳಿಗ್ಗೆ 10ಕ್ಕೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿರುವ ಕೃಷಿ ವೈಭವ ಕಾರ್ಯಕ್ರಮದಲ್ಲಿ  ಕೃಷಿದರ್ಶನ -2020 ವಿಚಾರಸಂಕಿರಣ, ಕೃಷಿ ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಕೃಷಿ ಆಧಾರಿತ ಕಾರ್ಯಕ್ರಮಗಳು ನಡೆಯಲಿವೆ~ ಎಂದು ತಿಳಿಸಿದರು.`16ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ರಂಗವೈಭವ ಕಾರ್ಯಕ್ರಮ ನಡೆಯಲಿದೆ. ನಾದರಂಗದ ವೈ.ಎಂ. ಪುಟ್ಟಣ್ಣಯ ಮತ್ತು ತಂಡದವರಿಂದ ರಂಗ ಗೀತಾಂಜಲಿ, ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ನಡೆಯಲಿದೆ. 17ರಂದು ಸಂಜೆ 5.30ಕ್ಕೆ ಶಾರದವಿಲಾಸ ಶತಮಾನೋತ್ಸವ ಭವನದಲ್ಲಿ ಗಮಕ ವೈಭವ ಕಾರ್ಯಕ್ರಮ ನಡೆಯಲಿದೆ. ಗಮಕಿಗಳಾದ ಕಡಬ ಸುಬ್ರಮಣ್ಯ, ಬಿ.ಎಚ್. ನಾಗರತ್ನ, ಮತ್ತೂರು ಕುಮಾರಸ್ವಾಮಿ, ಮತ್ತೂರು ಎಸ್. ಸನತ್‌ಕುಮಾರ್, ಆರ್.ಎಸ್ ಅನ್ನಪೂರ್ಣ, ವಸಂತಾ ವೆಂಕಟೇಶ್ ಶ್ರೀಲಕ್ಷ್ಮೀ, ಎನ್. ಇಂದಿರಾ, ಕೆ.ಆರ್. ಸತ್ಯಲಕ್ಷ್ಮೀ ಆಗಮಿಸಲಿದ್ದಾರೆ~ ಎಂದು ಹೇಳಿದರು.`18ರಂದು ಸಂಜೆ 4.30ಕ್ಕೆ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಅಷ್ಟಾವಧಾನ ನಡೆಯಲಿದ್ದು, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಶತಾವಧಾನಿ ಆರ್. ಗಣೇಶ್, ಕುಮಾರ ನಿಜಗುಣಸ್ವಾಮೀಜಿ, ಡಾ. ಎನ್.ಎಸ್.ತಾರಾನಾಥ್ ವಿದ್ವಾನ್ ಉಮಾಕಾಂತ ಭಟ್ಟ, ಡಾ. ಎಚ್.ವಿ. ನಾಗರಾಜರಾವ್, ಚಂದ್ರಶೇಖರ ಕೇದಿಲಾಯ, ಮಂಜುನಾಥ ಕೊಳ್ಳೇಗಾಲ, ಶಂಕರನಾರಾಯಣ ಉಪಾಧ್ಯಾಯ, ಡಾ. ಸಿ.ಎಸ್.ಯೋಗಾನಂದ ಭಾಗವಹಿಸುವರು~ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿ.ಕೆ. ರವೀಂದ್ರಕುಮಾರ್, ವಿ.ಎಸ್. ಸುಬ್ರಹ್ಮಣ್ಯ, ಪ್ರಭುಸ್ವಾಮಿ ಮಳೀಮಠ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry