ಸೋಮವಾರ, ಏಪ್ರಿಲ್ 19, 2021
32 °C

12ರಿಂದ ಗದುಗಿನಲ್ಲಿ ಉದ್ಯೋಗ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಉತ್ತರ ಕರ್ನಾಟಕ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ನಗರದ ಪರಿಸರ ಯಂಗ್ ಇಂಡಿಯಾ ಪರಿವಾರ ಸಂಸ್ಥೆಯು ಆ.12 ಮತ್ತು 13ರಂದು ನಗರದಲ್ಲಿ ಉದ್ಯೋ ಗೋತ್ಸವ-2012 ಆಯೋಜಿಸಿದೆ.ನಗರದ ವಿದ್ಯಾದಾನ ಸಮಿತಿ ಆವರಣದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಯೋ ಗೋತ್ಸವ-2012 ಅನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ಸುಮಾರು 50 ಕಂಪೆನಿಗಳು ಭಾಗವಹಿಸುತ್ತಿದ್ದು, ಒಂದು ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಬುಧ ವಾರ ಪತ್ರಿಕಾಗೋಷ್ಠಿಯಲ್ಲಿ ಪರಿವಾರದ ಮುಖ್ಯಸ್ಥ ವೆಂಕನಗೌಡ್ರ ಗೋವಿಂದಗೌಡ್ರ ತಿಳಿಸಿದರು.ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ 50ಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ. ಐಟಿಐ, ಡಿಪ್ಲೊಮಾ, ಎಂಬಿಎ, ಬಿಇ, ಬಿಸಿಎ, ಬಿಬಿಎ, ಬಿಕಾಂ, ಎಂಕಾಂ, ಎಂಸಿಎ, ಬಿಟೆಕ್ ಪದವೀಧರರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋದಣಿ ಮಾಡಬೇಕಾದರೆ ಮೊ. ನಂ. 9620540564 ಗೆ ಮಿಸ್ ಕಾಲ್ ಕೊಡಬೇಕು. ಆಗ ನೋಂದಣಿ ಸಂಖ್ಯೆ ಇರುವ ಎಸ್‌ಎಂಎಸ್ ಬರಲಿದೆ.ಅಭ್ಯರ್ಥಿಗಳು ಬಯೋಡೇಟಾ, ಎರಡು ಪಾಸ್‌ಪೋರ್ಟ್ ಭಾವಚಿತ್ರ, ಅಗತ್ಯ ದಾಖಲೆಗಳನ್ನು ತರಬೇಕು. ಹಳೇ ಬಸ್ ನಿಲ್ದಾಣ ಮತ್ತು ಹೊಸ ಬಸ್ ನಿಲ್ದಾಣದಿಂದ ಉದ್ಯೋಗ ಮೇಳ ನಡೆಯುವ ಸ್ಥಳಕ್ಕೆ ಉಚಿತ ಆಟೋ ಸೇವೆ ಒದಗಿಸಲಾಗಿದೆ.ಗದಗ ಜಿಲ್ಲೆಯಲ್ಲದೆ ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಹಾವೇರಿ, ಕಾರವಾರ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಯುವಕ-ಯುವತಿಯರು ಮೇಳದಲ್ಲಿ ಭಾಗವಹಿಸಬಹುದು. ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗವಾಹಿನಿ ವಾಹನದ ಮೂಲಕ  ಉದ್ಯೋಗ ಮೇಳದ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಪರಿವಾರದ ಜಿಲ್ಲಾ ಘಟಕ ಅಧ್ಯಕ್ಷ ವಿಜಯ ಕಲ್ಮಠ್, ಅಬ್ದುಲ್, ಸುಧೀರ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.