12ರಿಂದ ದಾಸರ ಸ್ಮರಣೆಯ ‘ಹರಿದಾಸ ಹಬ್ಬ’

7

12ರಿಂದ ದಾಸರ ಸ್ಮರಣೆಯ ‘ಹರಿದಾಸ ಹಬ್ಬ’

Published:
Updated:

ಚಿತ್ರದುರ್ಗ: ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಇದೇ  12ರಿಂದ 19ರವರೆಗೆ ವಿಜಯವಿಠ್ಠಲ ಪ್ರಶಸ್ತಿ ಪುರಸ್ಕೃತ ಹರಿವಾಯುಗುರು ಸೇವಾ ಸಂಘದ ವತಿಯಿಂದ ಕನಕ ಪುರಂದರಾದಿ ಹರಿದಾಸರನ್ನು ಸ್ಮರಿಸುವ ಅಂಗವಾಗಿ ‘ಹರಿದಾಸ ಹಬ್ಬ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.12ರಂದು ಮಂತ್ರಾಲಯದ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್‌. ಪಂಚಮುಖಿ  ಅವರು ‘ದಾಸ ಸುಜ್ಞಾನ ದೀಪ’ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಶೇಷ ಅಭ್ಯಾಗತರಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪಾದ ಪುತ್ರ  ರಾಜಾ ಎಸ್‌. ಸುಜ್ಞಾನೇಂದ್ರಚಾರ್ಯ ದಂಪತಿ ಭಾಗವಹಿಸುವರು. ವಿದ್ವಾನ್‌ ಪ್ರದ್ಯುಮ್ನಾಚಾರ್ಯ ಜೋಶಿ ಪ್ರವಚನಕಾರರಾಗಿ, ಅತಿಥಿಯಾಗಿ ಸಂಸದ ಜನಾರ್ದನಸ್ವಾಮಿ ಭಾಗವಹಿಸುವರು.13ರಂದು ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಬೆಳಿಗ್ಗೆ 8ಕ್ಕೆ ‘ವ್ಯಾಸ ವಿಜ್ಞಾನ ದೀಪ’ ಉದ್ಘಾಟನೆ ಹಾಗೂ ಪ್ರವಚನ ಸಪ್ತಾಹ ಕಾರ್ಯಕ್ರಮವಿದೆ. ಬೆಳಿಗ್ಗೆ 8ರಿಂದ 9ರವರೆಗೆ ವಿದ್ವಾನ್‌ ಪ್ರದ್ಯುಮ್ನಾಚಾರ್ಯ ಅವರಿಂದ ಸ್ತ್ರೀ ಹಾಗೂ ಪುರುಷ ಧರ್ಮದ ವಿಷಯ ಕುರಿತು ಪ್ರವಚನವಿದೆ. 14ರಂದು ಸಪ್ತಗಿರಿ ಭಜನಾ ಮಂಡಳಿ ವತಿಯಿಂದ ಪುರಂದರದಾಸರ ಕೃತಿ,  15ರಂದು ಸರಸ್ವತಿ ಭಜನಾ ಮಂಡಳಿ ವತಿಯಿಂದ ವಿಜಯದಾಸರ ಕೃತಿ, 16ರಂದು ಬ್ರಹ್ಮಚೈತನ್ಯ ಭಜನಾ ಮಂಡಳಿ ವತಿಯಿಂದ ಗೋಪಾಲದಾಸರ ಕೃತಿಗಳ ಕುರಿತು ಭಜನಾ ಕಾರ್ಯಕ್ರಮವಿದೆ.ಮಂತ್ರಾಲಯ ಶ್ರೀಗಳ ಪುರಪ್ರವೇಶ: 17ರಂದು ಸಂಜೆ 5ಕ್ಕೆ ಮಂತ್ರಾಲಯ ಮಠಾಧೀಶರ ಪುರಪ್ರವೇಶ ಕಾರ್ಯಕ್ರಮವಿದೆ. 5.30ಕ್ಕೆ ಪ್ರಾರಂಭವಾ­ಗುವ ಶೋಭಾಯಾತ್ರೆ, ಆನೆಬಾಗಿಲ ಸುವೃಷ್ಟಿ ಪ್ರಾಣದೇವರ ದೇವಸ್ಥಾನದಿಂದ ಹೊರಟು ಗಾಂಧಿ ವೃತ್ತ, ಎಸ್‌ಬಿಎಂ ವೃತ್ತ, ಧರ್ಮಶಾಲಾ ರಸ್ತೆ ಮಾರ್ಗಗಳಲ್ಲಿ ಸಂಚರಿಸಿ ವಾಸವಿ ವಿದ್ಯಾಸಂಸ್ಥೆ ತಲುಪಲಿದೆ. ನಂತರ ಸಂಜೆ 6.30ಕ್ಕೆ ಪ್ರವಚನದ ಮಂಗಳ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.18ರಂದು ರಾಘವೇಂದ್ರಸ್ವಾಮಿ ಮಠದಲ್ಲಿ ಬೆಳಿಗ್ಗೆ 6ಕ್ಕೆ ಹರಿವಾಯುಸ್ತುತಿ ಪುನಃಶ್ಚರಣ ಹೋಮ, ಸಂಜೆ 6.30ಕ್ಕೆ ವಾಸವಿ ವಿದ್ಯಾಸಂಸ್ಥೆಯಲ್ಲಿ ರಾಮ ಡೋಲೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಸೌಹಾರ್ದ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಆರ್‌. ಲಕ್ಷ್ಮಿಕಾಂತರೆಡ್ಡಿ ಅತಿಥಿಯಾಗಿ ಭಾಗವಹಿಸುವರು. ಪುರೋಹಿತ ಸೊನ್ನಿ ರಂಗನಾಥಾಚಾರ್ಯ, ಜ್ಯೋತಿಷಿ ಸಿ.ಪಿ. ಲಕ್ಷ್ಮಿನಾರಾಯಣ ಜೋಯಿಸ್‌, ಅರ್ಚಕಾ ಲಕ್ಷ್ಮಿನರಸಿಂಹ ಭಟ್ಟರ್‌ ಅವರಿಗೆ ಗೌರವ ಸನ್ಮಾನ ನಡೆಯಲಿದೆ.19ರಂದು ಬೆಳಿಗ್ಗೆ 6.30ಕ್ಕೆ ಒಂದು ಸಾವಿರ ಜನ ತ್ರಿಮತಸ್ಥ ವಿಪ್ರ ಬಾಂಧವರ ಸಹಯೋಗದೊಂದಿಗೆ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಸಹಿತ ವಿಷ್ಣು ಮಹಾಯಾಗ ನಡೆಯಲಿದೆ.ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಪ್ರಭಾತ್‌ ಆರ್ಟ್‌ ಇಂಟರ್‌ನ್ಯಾಷನಲ್‌ ಕಲಾ ಸಂಸ್ಥೆಯವರು ‘ಶ್ರೀನಿವಾಸ ಕಲ್ಯಾಣ’ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ. ಪ್ರತಿದಿನ ಸಂಜೆ 6ರಿಂದ 6.30ರವರೆಗೆ ಸಾಮೂಹಿಕ ವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಜರುಗಲಿದೆ ಎಂದು ಮಂಡಳಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry