12ರಿಂದ ಭಾರತೀಯ ಪತ್ರಕರ್ತರ ಒಕ್ಕೂಟದ ಅಧಿವೇಶನ

7

12ರಿಂದ ಭಾರತೀಯ ಪತ್ರಕರ್ತರ ಒಕ್ಕೂಟದ ಅಧಿವೇಶನ

Published:
Updated:

ದಾವಣಗೆರೆ: ಭಾರತೀಯ ಪತ್ರಕರ್ತರ ಒಕ್ಕೂಟದ 65ನೇ ಅಧಿವೇಶನ ತುಮಕೂರಿನ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಅ. 12 ಮತ್ತು 13ರಂದು ನಡೆಯಲಿದೆ.ಅಧಿವೇಶನವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸುವರು.  ಎರಡು ದಿನಗಳ ಅಧಿವೇಶನದಲ್ಲಿ ಪತ್ರಕರ್ತರ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿದೆ. 3 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.ಜಿಲ್ಲಾ ಘಟಕಗಳಿಂದ ಅಧಿವೇಶನಕ್ಕೆ ಭಾಗವಹಿಸುವ ಪತ್ರಕರ್ತರ  ಪಟ್ಟಿಯನ್ನು ಅ. 5ರ ಒಳಗೆ ರಾಜ್ಯ ಘಟಕಕ್ಕೆ, ಪಾಲ್ಗೊಳ್ಳುವ ಸದಸ್ಯರ ಪಟ್ಟಿ ಹಾಗೂ ಒಬ್ಬ ಸದಸ್ಯರಿಗೆ ್ಙ 100 ಪ್ರಕಾರ ನಗದನ್ನು ಜತೆಯಲ್ಲಿ ತಲುಪಿಸಬೇಕು. ಈ ಹಿನ್ನೆಲೆಯಲ್ಲಿ ಅ. 1ರಂದು  ಸಂಜೆ 4ಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷ ಕೆ.ಎಂ. ಸಿದ್ದಲಿಂಗಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿವರಕ್ಕೆ ಮೊಬೈಲ್: 82774 32364 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry