ಸೋಮವಾರ, ಜೂನ್ 14, 2021
26 °C

12 ತಾತ್ಕಾಲಿಕ ಚೆಕ್‌ಪೋಸ್ಟ್‌ ನಿರ್ಮಾಣ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ಗುಲ್ಬರ್ಗ ಜಿಲ್ಲೆ ಯಲ್ಲಿ ಅಬಕಾರಿ ಇಲಾಖೆಯ ವತಿ ಯಿಂದ 12 ತಾತ್ಕಾಲಿಕ  ಚೆಕ್‌ಪೋಸ್ಟ್‌ (ತನಿಖಾ ಠಾಣೆಗಳ) ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.ಜಿಲ್ಲೆಯಾದ್ಯಂತ ಅಕ್ರಮ ಮದ್ಯ, ನಕಲಿ ಮದ್ಯ, ಸೇಂದಿ, ಕಳ್ಳಬಟ್ಟಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ, ಸಂಗ್ರಹಣೆ ಹಾಗೂ ಮಾರಾಟ ಗಳಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಕೆಲಸ ವನ್ನು ಚೆಕ್‌ಪೋಸ್ಟ್‌ಗಳು ಮಾಡಲಿವೆ. ಈ ಚೆಕ್‌ಪೊಸ್ಟ್‌ ಗಳಲ್ಲಿ ದಿನದ ೨೪ ಗಂಟೆಗಳ ಕರ್ತವ್ಯ ನಿರ್ವಹಿಸಲು ಈ ಇಲಾಖೆಯ ಅಬಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ.ಗಡಿಭಾಗದಿಂದ ಉಪ ರಸ್ತೆಗಳಿಗೆ ಹೋಗುವ-ಬರುವ ವಾಹನಗಳನ್ನು ತಡೆದು ಅವುಗಳನ್ನು ತಪಾಸಣೆ ಮಾಡಿ ಈ ಬಗ್ಗೆ ತನಿಖಾ ಠಾಣೆ ವಹಿಯಲ್ಲಿ ವಾಹನ ಸಂಖ್ಯೆ ಹಾಗೂ ವಾಹನ ದಲ್ಲಿನ ಮುದ್ದೇಮಾಲಿನ ವಿವರ ನಮೂದಿಸತಕ್ಕದ್ದು ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ.ಚೆಕ್‌ಪೋಸ್ಟ್‌ಗಳ ವಿವರ: ಖಜೂರಿ ತನಿಖಾ ಠಾಣೆ (ಸೈಯದ ಕುಂದಮೀರ್ ಹುಸೇನಿ, ಪೀರಪ್ಪ), ನಿಂಬರ್ಗಾ (ಶಿವಶರಣಪ್ಪ ಪಾಟೀಲ್, ನಾಗಪ್),  ಹಿರೋಳ್ಳಿ ರಸ್ತೆ (ಉಮಾಕಾಂತ, ವಿಠಲ್ ತೆಗನೂರ), ಕರಜಗಿ  (ಶರಣಪ್ಪ, ಸುದರ್ಶನ ಕುಮಾರ), ಸೊನ್ನ ಕ್ರಾಸ್ (ಮಲ್ಲಯ್ಯ ಸ್ವಾಮಿ, ಅಣ್ಣಪ್ಪ), ಮಿರಿಯಾಣ (ಸಲಿಮೋದ್ದಿನ್, ಬಸವರಾಜ), ಕುಂಚಾವರಂ (ಮಹೆಬೂಬ ಪಟೇಲ್, ಮೋಹನ), ಕುಸರಂಪಳ್ಳಿ (ಸಿದ್ದಣ ಗೌಡ, ವಿನೋದ), ಕುರಕುಂಟಾ (ಸಾಯಿಬಣ್ಣ, ಅಬ್ದುಲ್‌), ರಿಬ್ಬನಪಲ್ಲಿ (ಬಸವರಾಜ, ಸುನೀಲ್ ದತ್ತ), ನಾಲವಾರ (ಕಲ್ಯಾಣಿ, ಯಶವಂತ), ಜೆರಟಗಿ  (ಕಾಶಿನಾಥ, ಭೀಮರಾಯ).ಚೆಕ್‌ಪೋಸ್ಟ್‌ ಠಾಣೆಗಳಿಗೆ ನಿಯೋಜಿಸಿದ ಸಿಬ್ಬಂದಿಗೆ ರೇಡಿಯಂ, ಜಾಕೇಟ್, ಟಾರ್ಚ್‌ ಹಾಗೂ ಲಾಟಿಗಳನ್ನು ಕೂಡಲೇ ಒದಗಿಸುವಂತೆ ಸಂಬಂಧಪಟ್ಟ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಗುಲ್ಬರ್ಗ/ಚಿತ್ತಾಪುರ ಕಚೆೇರಿಗೆ ಸೂಚಿಸಿದ್ದಾರೆ. ಸದರಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಮಯ ದಲ್ಲಿ ಸದರಿ ಪರಿಕರಗಳನ್ನು ಪಡೆದುಕೊಂಡು ಹೋಗುವುದು. ಚೆಕ್‌ಪೋಸ್ಟ್‌ ಠಾಣೆಗಳಿಗೆ ನಿಯೋಜಿ ಸಿದ ಇಬ್ಬರು ಸಿಬ್ಬಂದಿ ಕರ್ತವ್ಯ ಒಟ್ಟು ೨೪ ಗಂಟೆಗೆ ಸೀಮಿತ ವಾಗಿ ರುತ್ತದೆ. ಪ್ರತಿ ದಿವಸ ಸಂಬಂಧಪಟ್ಟ ವಲಯ ನಿರೀಕ್ಷಕರು ದಿನಂಪ್ರತಿ ಭೇಟಿ ನೀಡಿ ತನಿಖಾ ಪುಸ್ತಕದಲ್ಲಿ ನಮೂದಿಸಬೇಕು.ಸಂಬಂಧಪಟ್ಟ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು, ಮೇಲುಸ್ತುವಾರಿಯನ್ನು ವಹಿಸಿ ವರದಿ ನೀಡಬೇಕು ಎಂದು ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.