ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಗ್ರಾ.ಪಂ. ಸ್ಥಾನಕ್ಕೆ ಅವಿರೋಧ ಆಯ್ಕೆ

Last Updated 17 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಲು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಹಾಗೂ ಸದಸ್ಯರು ಆಯ್ಕೆಯಾಗದೆ ಖಾಲಿ ಉಳಿದಿರುವ 31 ಸದಸ್ಯ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 19 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 42 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಆಲೂರು, ಅಟ್ಟುಗೂಳಿಪುರ ಗ್ರಾ.ಪಂ.ನ ತಲಾ ಒಂದು ಸ್ಥಾನ, ಕೊಳ್ಳೇಗಾಲ ತಾಲ್ಲೂಕು ಕುರಟ್ಟಿಹೊಸೂರು ಗ್ರಾ.ಪಂ.ನ 7 ಸ್ಥಾನ, ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ ಗ್ರಾ.ಪಂ.ನ ಒಂದು ಸ್ಥಾನ, ಯಳಂದೂರು ತಾಲ್ಲೂಕಿನ ಅಗರ, ದುಗ್ಗಟ್ಟಿ ಗ್ರಾ.ಪಂ.ನ ತಲಾ ಒಂದು ಸ್ಥಾನ ಸೇರಿದಂತೆ ಒಟ್ಟು 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯ ಒಂದು ಸ್ಥಾನಕ್ಕೆ ಇಬ್ಬರು, ಮುಕ್ಕಡಹಳ್ಳಿ ಗ್ರಾ.ಪಂ.ನ ಒಂದು ಕ್ಷೇತ್ರಕ್ಕೆ ಇಬ್ಬರು, ಹೊನ್ನಹಳ್ಳಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ ಇಬ್ಬರು, ದೊಡ್ಡಮೋಳೆ ಗ್ರಾ.ಪಂ.ನ ಒಂದು ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ ನಾಲ್ಕು ಸ್ಥಾನಗಳಿಗೆ ನಡೆಯ ಲಿರುವ ಚುನಾವಣೆಗೆ 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿಹೊಸೂರು ಗ್ರಾ.ಪಂ.ನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 13 ಮಂದಿ ಕಣದಲ್ಲಿ ಉಳಿದಿದ್ದಾರೆ. ಕುಂತೂರು ಗ್ರಾ.ಪಂ.ನ 1 ಸ್ಥಾನಕ್ಕೆ ಇಬ್ಬರು, ಕೌದಳ್ಳಿ ಗ್ರಾ.ಪಂ.ನ 1 ಸ್ಥಾನಕ್ಕೆ ಇಬ್ಬರು,  ಮಲೆಮಹದೇಶ್ವರಬೆಟ್ಟ ಗ್ರಾ.ಪಂ.ನ 1 ಕ್ಷೇತ್ರಕ್ಕೆ ಮೂವರು, ಸತ್ತೇಗಾಲ ಗ್ರಾ.ಪಂ.ನ 1 ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ನಡೆಯಲಿರುವ 10 ಸದಸ್ಯ ಸ್ಥಾನಕ್ಕೆ 22 ಮಂದಿ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಚಿಕ್ಕಾಟಿ ಗ್ರಾ.ಪಂ.ನ 1 ಕ್ಷೇತ್ರಕ್ಕೆ ಇಬ್ಬರು, ಬೇಗೂರು ಗ್ರಾ.ಪಂ.ನ 1 ಕ್ಷೇತ್ರಕ್ಕೆ ನಾಲ್ಕು, ಅಣ್ಣೂರು ಗ್ರಾ.ಪಂ.ನ 1 ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ನಡೆಯಲಿರುವ 3 ಸ್ಥಾನಗಳಿಗೆ 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಯಳಂದೂರು ತಾಲ್ಲೂಕು ಗೌಡಹಳ್ಳಿ ಗ್ರಾ.ಪಂ.ನ 1 ಸದಸ್ಯ ಸ್ಥಾನಕ್ಕೆ ಇಬ್ಬರು, ಮಾಂಬಳ್ಳಿ ಗ್ರಾ.ಪಂ.ನ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಎರಡು ಸದಸ್ಯ ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳು  ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT