ಸೋಮವಾರ, ಜೂನ್ 14, 2021
27 °C

1200 ಮನೆ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ 22 ಕೊಳೆ­ಗೇರಿ ಗುರುತಿಸಲಾಗಿದೆ. ನಗರ ಒಂದ­ರಲ್ಲೇ 51 ಸಾವಿರ ಜನ ಕೊಳೆಗೇರಿ ನಿವಾಸಿಗಳಿದ್ದು, ಇವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ₨ 70 ಕೋಟಿ ವೆಚ್ಚದ ಯೋಜನೆ ಅನುಷ್ಠಾನಗೊಳಿಸ­ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಶುಕ್ರವಾರ ಹೇಳಿದರು.ನಗರದ ಹೊರವಲಯದ ದಿಬ್ಬೂರಿ­ನಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ರಾಜೀವ್‌ ಆವಾಸ್‌ ಯೋಜನೆಯಡಿ 1200 ಮನೆ­ಗಳ ನಿರ್ಮಾಣ ಹಾಗೂ ಮೂಲ­ಸೌಕರ್ಯ ಕಾಮಗಾರಿಗಳ ಶಂಕು­ಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.ಮೊದಲ ಹಂತದಲ್ಲಿ 10 ಪಟ್ಟಣ­ಗಳಲ್ಲಿ ಯೋಜನೆ ಜಾರಿಗೆ ಸಂಪುಟ ಅನುಮೋದನೆ ನೀಡಿದೆ. ಎರಡನೇ ಹಂತದಲ್ಲಿ ಮಧುಗಿರಿ, ಶಿರಾ ಸೇರಿದಂತೆ 30 ಪಟ್ಟಣಗಳಲ್ಲಿ ಯೋಜನೆ ಜಾರಿ­ಯಾಗ­ಲಿದೆ ಎಂದು ತಿಳಿಸಿದರು.ಗೃಹ ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಾಂತ್ರಿಕತೆ ಅನುಸರಿಸುವ ಅಗತ್ಯವಿದೆ. ಅಧಿಕಾರಿಗಳು, ಜನರು ತಾಂತ್ರಿಕತೆ ಬಳಕೆಗೆ ಮುಂದಾಗಬೇಕು ಎಂದರು.ಕೊಳೆಗೇರಿ ಅಭಿವೃದ್ಧಿ ಮಂಡಳಿ ತಾಂತ್ರಿಕ ನಿರ್ದೇಶಕ ಸಣ್ಣಚಿತ್ತಯ್ಯ ಮಾತ­ನಾಡಿ, 2005ರಲ್ಲಿ ಆರಂಭ­ವಾದ ಜವಹಾರ್‌ಲಾಲ್‌ ನೆಹರು ನಗರ ಪುನರುಜ್ಜೀವನ ಯೋಜನೆ (ಜೆ–ನರ್ಮ್‌) ಮೂಲಕ ರಾಜ್ಯದಲ್ಲಿ ₨ 728 ಕೋಟಿ ವೆಚ್ಚದ 24,508 ಮನೆ ನಿರ್ಮಿಸಲಾಗಿದೆ. 2013ರಿಂದ ಆರಂಭ­ವಾಗಿರುವ ರಾಜೀವ್‌ ಆವಾಸ್‌ ಯೋಜನೆ­ಯಲ್ಲಿ ರಾಜ್ಯಕ್ಕೆ ₨ 2500 ಕೋಟಿ ಬಂದಿದೆ. ರಾಜ್ಯದ 40 ನಗರ­ಗಳಲ್ಲಿ 60 ಸಾವಿರ ಮನೆ ಕಟ್ಟುವ ಯೋಜನೆ ಇದಾಗಿದೆ ಎಂದರು.ದಿಬ್ಬೂರಿನಲ್ಲಿ ಶಂಕುಸ್ಥಾಪನೆ ಮಾಡ­ಲಾದ ಕಾಮಗಾರಿಯನ್ನು 15 ತಿಂಗ­ಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದ­ಲಾ­ಗಿದೆ ಎಂದರು.ಶಾಸಕ ರಫೀಕ್‌ ಅಹಮದ್‌, ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಆರ್‌.ಹುಲಿ­ನಾಯ್ಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಷಫಿ ಅಹ್ಮದ್‌, ಮೇಯರ್‌ ಗೀತಾ, ಸಿಇಒ ಕೆ.ಎನ್‌.ಗೋವಿಂದರಾಜು, ಚಿಂತಕ ಕೆ.ದೊರೈರಾಜು, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ.ನರಸಿಂಹಮೂರ್ತಿ ಇತರರು ಇದ್ದರು.ಇದಕ್ಕೂ ಮುನ್ನ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಚೇರಿ ಸಂಕೀರ್ಣದ ನೂತನ ಕಟ್ಟಡವನ್ನು ಜಯಚಂದ್ರ ಉದ್ಘಾಟಿಸಿದರು.ರೈಲು ಯೋಜನೆಗೆ ಭೂಮಿ: ಒಪ್ಪಿತ ಪರಿಹಾರ

ತುಮಕೂರು:
ತುಮಕೂರು– ರಾಯ­ದುರ್ಗ­, ಹಾಗೂ ದಾವಣಗೆರೆ ರೈಲು ಯೋಜ­ನೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಿತ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಟಿ.ಬಿ.­ಜಯಚಂದ್ರ ಹೇಳಿದರು.

ಸಾಮಾನ್ಯ ಪರಿಹಾರ ನೀಡುವ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ನೂತನ ಭೂ­ಸ್ವಾಧೀನ ಕಾಯ್ದೆ ಜಾರಿಯಾದ ಹಿನ್ನೆಲೆ­ಯಲ್ಲಿ ಭೂಮಿ ಪಡೆಯಲು ರೈತರ ಒಪ್ಪಿಗೆ ಪಡೆದು ದರ ನಿಗದಿಗೊಳಿಸ­ಲಾಗುವುದು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು.ದುಡ್ಡಿಗೆ ಬರವಿಲ್ಲ: ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂ­ಡಿದೆ. ನೀರು ಪೂರೈ­ಕೆಗೆ ₨ 102 ಕೋಟಿ ಮೀಸಲಿರಿಸ­ಲಾ­ಗಿದೆ. ಇದರಲ್ಲಿ ಜಿಲ್ಲೆಗೆ ₨ 3ರಿಂದ 4 ಕೋಟಿ ಸಿಗಲಿದೆ ಎಂದರು.ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₨ 1700 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ತುಮಕೂರಿಗೆ ₨ 130 ಕೋಟಿ ಸಿಕ್ಕಿದ್ದು, 40 ಎಲ್‌ಪಿಸಿಡಿ ಹಳ್ಳಿ­ಗಳನ್ನು ಗುರುತಿಸಿ, ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.