ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1200 ಡಾಲರ್‌ಗೆ ಎರಡು ಸೇಬು!

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾದ ಯುವತಿಯೊಬ್ಬಳು 1,200 (ರೂ72 ಸಾವಿರ ) ಡಾಲರ್ ದುಬಾರಿ ಮೊತ್ತಕ್ಕೆ ಎರಡು ಸೇಬು ಖರೀದಿಸಿದ್ದಾಳೆ. ಇದು ಯಾವುದೇ ಹರಾಜಿನಲ್ಲಿ ಕೊಂಡಿದ್ದಲ್ಲ. ಬದಲಾಗಿ ಮೋಸಕ್ಕೆ ಬಲಿಯಾಗಿದ್ದಾಳೆ.

21 ವರ್ಷದ ಯುವತಿ ಎರಡು ಆಪಲ್ ಸ್ಮಾರ್ಟ್ ಫೋನ್ ಕೊಳ್ಳಲು `ಗಮ್‌ಟ್ರೀ'  ಆನ್‌ಲೈನ್ ಮಾರಾಟ ಸಂಸ್ಥೆಗೆ ಮನವಿ ಸಲ್ಲಿಸಿದ್ದಾಳೆ. ಮತ್ತೊಬ್ಬ ಮಹಿಳೆ `ಎರಡು ಆಪಲ್‌ಗಳು ಮಾರಾಟಕ್ಕಿವೆ' ಎಂದು ಜಾಲತಾಣದಲ್ಲಿ ಜಾಹೀರಾತು ನೀಡಿದ್ದಾಳೆ.

ಯುವತಿ ಮ್ಯಾಕ್‌ಡೊನಾಲ್ಡ್ ರೆಸ್ಟೋರೆಂಟಿನಲ್ಲಿ ಮಹಿಳೆಯನ್ನು ಭೇಟಿಯಾಗಿ ಹಣ ಪಾವತಿಸಿ ಫೋನ್ ಬಾಕ್ಸ್ ತೆಗೆದುಕೊಂಡು ಮನೆಗೆ ಬಂದಿದ್ದಾಳೆ. ಮನೆಗೆ ಬಂದ ನಂತರ ತೆಗೆದು ನೋಡಿದರೆ ಒಳಗಡೆ ಎರಡು ಸೇಬು ಹಣ್ಣುಗಳಿದ್ದವು. ಆಗಲೇ ಯುವತಿಗೆ ಗೊತ್ತಾಗಿದ್ದು, ತಾನು ಮೋಸ ಹೋಗಿದ್ದೇನೆ ಎಂದು!

ಸಂಸ್ಥೆಯ ವಕ್ತಾರೆ ನಿಕಿ ಹೆನ್ನೆಸಿ ಇದಕ್ಕೆ ಪ್ರತಿಕ್ರಿಯಿಸಿ, `ಸಂಸ್ಥೆಯು ಮಾರಾಟ ಪ್ರಕ್ರಿಯೆಯನ್ನು ಸುಧಾರಿಸಲಿದೆ ಮತ್ತು ಗ್ರಾಹಕರಿಗೆ ವಸ್ತುಗಳ ಬಗ್ಗೆ ವಿವರವಾದ ಮಾಹಿತಿ ನೀಡಲಿದೆ' ಎಂದಿದ್ದಾರೆ.

`ಆನ್‌ಲೈನ್‌ನಲ್ಲಿ ಖರೀದಿ ಸಂದರ್ಭದಲ್ಲಿ ಜನರು ಎಚ್ಚರ ವಹಿಸಬೇಕು' ಎಂದು  ಸ್ಥಳೀಯ ಪೊಲೀಸ್ ಅಧಿಕಾರಿ ಜೆಸ್ ಹಾಪ್‌ಕಿನ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT