ಮಂಗಳವಾರ, ಜನವರಿ 28, 2020
17 °C
ಬೆಳಗಾವಿ ವಿಧಾನಮಂಡಲ ಅಧಿವೇಶನ–2013

122 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಬೆಳಗಾವಿ ಜಿಲ್ಲೆಯ ೧೨೨ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ೨೦೧೪ರ ನವೆಂಬರ್ ೧ರೊಳಗೆ ಎಲ್ಲ ಜನವಸತಿ ಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗು ವುದು ಎಂದು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ನ ವೀರಕುಮಾರ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಜಿಲ್ಲೆಯ ೧೨೨ ಜನವಸತಿಗಳಲ್ಲಿ ನೀರಿನ ಸಮಸ್ಯೆ ಇದೆ. ಜಿಲ್ಲೆಯಲ್ಲಿ ೬೫ ಬಹುಗ್ರಾಮ ಕುಡಿ ಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದರು.ನಿಗದಿತ ಕಾಲಮಿತಿಯೊಳಗೆ ೧೨೨ ಜನವಸತಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡುವು ದಾಗಿ ಘೋಷಿಸುವಂತೆ ವೀರ ಕುಮಾರ್ ಪಾಟೀಲ ಮತ್ತು ಬಿಜೆಪಿಯ ಮಹಾಂತೇಶ ಕವಟಗಿ ಮಠ ಒತ್ತಾಯಿಸಿದಾಗ ಮುಂದಿನ ನ.೧ರೊಳಗೆ ಪೂರೈಸುವ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)