12470 ಸರ್ಕಾರಿ ಶಾಲೆಗಳಿಗೆ ಕುತ್ತು

7

12470 ಸರ್ಕಾರಿ ಶಾಲೆಗಳಿಗೆ ಕುತ್ತು

Published:
Updated:

ದಾವಣಗೆರೆ: `ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆ~ ಕುರಿತು ನವದೆಹಲಿಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್. ಗೋವಿಂದ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಜಾರಿಗೆ ಬಂದರೆ ರಾಜ್ಯದ 12,740 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಬೇಕಾಗುತ್ತದೆ.



`ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿಗೆ 30ಕ್ಕಿಂತ ಕಡಿಮೆ ಹಾಜರಾತಿ ಇರುವ 12,740 ಶಾಲೆಗಳಿವೆ. ಮುಂಬರುವ ದಿನಗಳಲ್ಲಿ ಅಂತಹ ಶಾಲೆಗಳನ್ನು ಸಮೀಪದ ಶಾಲೆಗಳೊಡನೆ ವಿಲೀನಗೊಳಿಸಬೇಕು~ ಎಂಬುದು ವರದಿಯಲ್ಲಿನ ಮುಖ್ಯ ಶಿಫಾರಸ್ಸುಗಳಲ್ಲೊಂದು. ಈ ವರದಿಯನ್ನು ಸರ್ಕಾರ ತನ್ನ ಅಧಿಕೃತ ಅಂತರ್‌ಜಾಲ ತಾಣದಲ್ಲಿ  ಪ್ರಕಟಿಸಿ, ಸಾರ್ವಜನಿಕರಿಂದ ಅಭಿಪ್ರಾಯವನ್ನೂ ಕೇಳಿದೆ.



ಏನಿದೆ ವರದಿಯಲ್ಲಿ?

*
 6 ಮತ್ತು 7ನೇ ತರಗತಿಗೆ 30 ಅಥವಾ ಕಡಿಮೆ ಮಕ್ಕಳು ದಾಖಲಾಗಿದ್ದರೆ ಅಂಥ ಶಾಲೆಗಳನ್ನು ಸಮೀಪದ ಶಾಲೆಗಳೊಡನೆ ವಿಲೀನಗೊಳಿಸುವುದು ಅಪೇಕ್ಷಣೀಯ.



*  ವಿಲೀನಕ್ಕೊಳಗಾದ ಶಾಲೆಗಳ ಶಿಕ್ಷಕರ ಸೇವೆಯನ್ನು ಹೊಸ ಶಾಲೆಗಳಲ್ಲಿ ಬಳಸಿಕೊಳ್ಳಬಹುದು.

*  30ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ವಿಲೀನಗೊಳಿಸುವುದರಿಂದ ಆರ್ಥಿಕ ಲಾಭಗಳಿವೆ.



* ಈಗ ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳಿಗೆ 22,718 ಹೆಚ್ಚುವರಿ ಕೊಠಡಿ ಹಾಗೂ 14,958 ಹೆಚ್ಚುವರಿ ಶಿಕ್ಷಕರು ಬೇಕು. 



* ಪ್ರತಿ ಕೊಠಡಿಗೆ ರೂ 5.45 ಲಕ್ಷದಂತೆ ಇದಕ್ಕೆ ಬೇಕಾಗುವ ಒಟ್ಟು ಹಣ 1,238.13 ಕೋಟಿ ರೂಪಾಯಿ.



* ಶಾಲೆಗಳನ್ನು ವಿಲೀನಗೊಳಿಸುವುದರಿಂದ ಕೇವಲ 5,208 ಕೊಠಡಿಗಳನ್ನು ನಿರ್ಮಿಸಿದರೆ ಸಾಕು. ಆಗ ಪ್ರತಿ ಕೊಠಡಿಗೆ ರೂ 5.45ಲಕ್ಷದಂತೆ ಒಟ್ಟು ರೂ 28.38 ಕೋಟಿ ಸಾಲುತ್ತದೆ.  ಸರ್ವ ಶಿಕ್ಷಣ ಅಭಿಯಾನದ ವೆಚ್ಚದ ಪ್ರಕಾರ ಸಿವಿಲ್ ಕೆಲಸಗಳು 2013ರ ಮಾರ್ಚ್ 31ರ ಒಳಗೆ ಪೂರ್ಣವಾಗಬೇಕು.



 ಶಾಲೆಗಳ ವಿಲೀನದಿಂದ ಹೊಸ ಶಿಕ್ಷಕರ ನೇಮಕಾತಿಯ ಅಗತ್ಯ ಉದ್ಭವಿಸಲಾರದು.  9 ಮತ್ತು 10ನೇ ತರಗತಿ ಇರುವ ಪ್ರೌಢಶಾಲೆಗಳನ್ನು ಕಿರಿಯ ಪ್ರೌಢಶಾಲೆಗಳೆಂದು ಪುನರ್ ನಾಮಕರಣ ಮಾಡಬೇಕು. ಪ್ರೌಢಶಾಲೆಗಳಿಗೆ ಅನುದಾನ ಮಂಜೂರು ಮಾಡಲು ಪ್ರತಿ ತರಗತಿಗೆ 25 ಮಕ್ಕಳ ದಾಖಲಾತಿ ಮತ್ತು ಹಾಜರಿ ಇರಬೇಕೆಂಬ ನಿಯಮ ಈಗಿದೆ. ಈ ಮಕ್ಕಳ ಸಂಖ್ಯೆಯನ್ನು 50ಕ್ಕೆ ಏರಿಸಬಹುದು. ಎಸ್ಸೆಸ್ಸೆಲ್ಸಿ ಮತ್ತು ಪಿಯುಗೆ ಒಂದೇ ಮಂಡಳಿ ಇರಬೇಕು ಎನ್ನುವುದು ವರದಿಯ ಪ್ರಮುಖ ಅಂಶಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry