ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

127 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

Last Updated 19 ಏಪ್ರಿಲ್ 2013, 8:36 IST
ಅಕ್ಷರ ಗಾತ್ರ

ಧಾರವಾಡ/ಹುಬ್ಬಳ್ಳಿ:  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ವಿರುದ್ಧ ಸ್ಪರ್ಧಿಸುವ ಉಮೇದಿನಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ತಮಿಳುನಾಡಿನ ಡಾ.ಕೆ.ಪದ್ಮರಾಜನ್, ರಾಘವೇಂದ್ರ ಎಂ. ಸೇರಿದಂತೆ ಒಟ್ಟು 6 ಜನರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 133 ಅಭ್ಯರ್ಥಿಗಳು  ನಾಮಪತ್ರಗಳನ್ನು ಸಲ್ಲಿಸಿದ್ದರು. ಗುರುವಾರ ಜರುಗಿದ ನಾಮಪತ್ರಗಳ ಪರಿಶೀಲನೆ ನಂತರ 127 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಪದ್ಮರಾಜನ್ ಕರ್ನಾಟಕದ ಮತದಾರರಲ್ಲ, 10 ಜನ ಅನುಮೋದಕರ ಹೆಸರು ಹಾಗೂ ಸಹಿ ಇಲ್ಲ ಹಾಗೂ ಫಾರ್ಮ್‌ ಸಂಖ್ಯೆ 26ನ್ನು ಸಲ್ಲಿಸಿಲ್ಲ. ಹಾಗೆಯೇ ಆರ್‌ಪಿಐನಿಂದ ಸ್ಪರ್ಧಿಸಿದ್ದ ರಾಘವೇಂದ್ರ ಅವರು 10 ಜನ ಅನುಮೋದಕರ ಬದಲು ಒಬ್ಬರು ಮಾತ್ರ ಸಹಿ ಇರಲಿಲ್ಲ. ಆದ್ದರಿಂದ ತಿರಸ್ಕರಿಸಲಾಗಿದೆ ಎಂದು ಕಾರಣ ನೀಡಲಾಗಿದೆ.

ಕಲಘಟಗಿ ಕ್ಷೇತ್ರದಲ್ಲಿ ಮೂವರು ಹಾಗೂ ಕುಂದಗೋಳದಲ್ಲಿ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.  ಕಲಘಟಗಿ ಕ್ಷೇತ್ರದ ಮೂವರು ಅಭ್ಯರ್ಥಿಗಳು ಹಾಗೂ ಕುಂದಗೋಳ ಕ್ಷೇತ್ರದ ಒಬ್ಬ ಅಭ್ಯರ್ಥಿ ಫಾರಂ ಎ ಮತ್ತು ಬಿ ಸಲ್ಲಿಸದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ.

ಎಲ್ಲ ಕೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಹುಜನ ಸಮಾಜ ಪಕ್ಷದ ತಲಾ ಒಬ್ಬ, ಧಾರವಾಡ ಮತ್ತು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತ್ತು ಪಶ್ಚಿಮ ಕ್ಷೇತ್ರದಲ್ಲಿ ಎನ್.ಸಿ.ಪಿ ಯ ತಲಾ ಒಬ್ಬ, ನೋಂದಾಯಿತ ಪಕ್ಷಗಳ 26 ಹಾಗೂ 70 ಜನ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹೇಶ ನಾಲ್ವಾಡರು ಮೂರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಎರಡು ನಾಮಪತ್ರಗಳು ಅಭ್ಯರ್ಥಿಯ ಸಹಿ ಇಲ್ಲದ ಕಾರಣ ತಿರಸ್ಕೃತಗೊಂಡಿವೆ.

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ 10 ಅಭ್ಯರ್ಥಿಗಳ ಪೈಕಿ  ಚನ್ನಪ್ಪ ಮಲ್ಲಿಗವಾಡ (ಆರ್‌ಪಿಐ-ಎ) ಸಲ್ಲಿಸಿದ್ದ ಎರಡು ನಾಮಪತ್ರಗಳ ಪೈಕಿ ಒಂದು ತಿರಸ್ಕೃತಗೊಂಡಿದೆ.

ಕಣದಲ್ಲಿ ಉಳಿದವರು
ನವಲಗುಂದ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಬಿಎಸ್‌ಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ಐದು ಹಾಗು ಏಳು ಜನ ಪಕ್ಷೇತರ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು.

ಕುಂದಗೋಳ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಬಿಎಸ್‌ಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ನಾಲ್ಕು ಹಾಗೂ ಮೂರು ಜನ ಪಕ್ಷೇತರರು ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು.

ಧಾರವಾಡ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್‌ಪಿ ಹಾಗೂ ಎನ್‌ಸಿಪಿ ಯ ತಲಾ ಒಂದು, ನೋಂದಾಯಿತ ಪಕ್ಷಗಳ 3 ಹಾಗು 14 ಜನ ಪಕ್ಷೇತರರು ಸೇರಿದಂತೆ ಒಟ್ಟು 22 .

ಹುಬ್ಬಳ್ಳಿ-ಧಾರವಾಡ (ಪೂರ್ವ): ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಬಿಎಸ್‌ಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ಹಾಗೂ ಪಕ್ಷೇತರ ಸೇರಿದಂತೆ ಒಟ್ಟು 10  ಅಭ್ಯರ್ಥಿಗಳ ತಲಾ ಮೂರು ನಾಮಪತ್ರಗಳು.

ಹುಬ್ಬಳ್ಳಿ-ಧಾರವಾಡ (ಕೇಂದ್ರ): ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್‌ಪಿ ಹಾಗೂ ಎನ್‌ಸಿಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ಮೂರು ಹಾಗು 24 ಜನ ಪಕ್ಷೇತರ ಸೇರಿದಂತೆ ಒಟ್ಟು 32 ಅಭ್ಯರ್ಥಿಗಳು.

ಹುಬ್ಬಳ್ಳಿ-ಧಾರವಾಡ (ಪಶ್ಚಿಮ): ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿ.ಎಸ್‌ಪಿ ಹಾಗೂ ಎನ್‌ಸಿಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ಆರು ಹಾಗೂ 13 ಜನ ಪಕ್ಷೇತರ ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು.

ಕಲಘಟಗಿ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಬಿಎಸ್‌ಪಿಯ ತಲಾ ಒಂದು, ನೋಂದಾಯಿತ ಪಕ್ಷಗಳ ಇಬ್ಬರು ಹಾಗೂ ಪಕ್ಷೇತರ ಆರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 16.

ಕಲಘಟಗಿ ವರದಿ 
ಕಲಘಟಗಿ:  ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ನಾಮ ಪತ್ರ ಪರಿಶಿಲನೆಯ ಸಂದರ್ಭದಲ್ಲಿ ಮೂರು ನಾಮಪತ್ರಗಳು ಬಿ ಫಾರಂ ಸಲ್ಲಿಸದೇ ಇರುವುದರಿಂದ ತಿರಸ್ಕೃತವಾಗಿವೆ.

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಶಿವಪ್ಪ ಅಕ್ಕಿ ಹಾಗೂ ವೈ.ಎನ್.ಪಾಟೀಲ ಹಾಗೂ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ  ಪುಂಡಲಿಕ ಪವಾರ ಅವರ ನಾಮಪತ್ರಗಳು ಬಿ ಫಾರಂ ಸಲ್ಲಿಸದ ಕಾರಣ ತಿರಸ್ಕೃತಗೊಂಡಿವೆ.  ಆದರೆ ವೈ.ಎನ್.ಪಾಟೀಲ ಹಾಗೂ ಶಿವಪ್ಪ ಅಕ್ಕಿ ಪಕ್ಷೇತರರಾಗಿಯೂ ನಾಮಪತ್ರ ಸಲ್ಲಿಸಿದ್ದುದರಿಂದ ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ 12  ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ನವಲಗುಂದ ವರದಿ
ನವಲಗುಂದ: ಸ್ಥಳೀಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ 16 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡಿವೆ.

ಚುನಾವಣಾಧಿಕಾರಿ ಎಸ್.ಎಂ.ಗಡಾದ ಪರಿಶೀಲನೆ ನಡೆಸಿ ಎಲ್ಲ ನಾಮಪತ್ರಗಳು ಕ್ರಮಬದ್ದವಾಗಿದ್ದು ಯಾವುದೇ ನಾಮಪತ್ರಗಳು ತಿರಸ್ಕೃತವಾಗಿಲ್ಲವೆಂದು ತಿಳಿಸಿದರು.

ಎಲ್ಲಿ ನಾವು ಸಲ್ಲಿಸಿದ ನಾಮಪತ್ರಗಳು ತಿರಸ್ಕೃತಿಗೊಳ್ಳುತ್ತವೆ ಎಂಬ ಆತಂಕದಲ್ಲಿದ್ದ ವಿವಿಧ ಪಕ್ಷದ ಮುಖಂಡರು, ತಮ್ಮ ನಾಮಪತ್ರ ಸ್ವಿಕತಗೊಳ್ಳುತ್ತಿದ್ದಂತೆಯೇ ಒಬ್ಬರಿಗೊಬ್ಬರು ಹಸ್ತಲಾಘವ ಮಾಡುತ್ತ ನಿಟ್ಟುಸಿರು ಬಿಡುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT