129 ಅನಕ್ಷರಸ್ಥ ಗ್ರಾ.ಪಂ. ಸದಸ್ಯರು!

ಬುಧವಾರ, ಜೂಲೈ 17, 2019
26 °C

129 ಅನಕ್ಷರಸ್ಥ ಗ್ರಾ.ಪಂ. ಸದಸ್ಯರು!

Published:
Updated:

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಪ್ರಸ್ತುತ ಅಧಿಕಾರ ಅವಧಿಯಲ್ಲಿನ ಗ್ರಾ.ಪಂ. ಸದಸ್ಯರ ಪೈಕಿ 129 ಮಂದಿ ಅನರಕ್ಷರಸ್ಥ ಗ್ರಾ.ಪಂ. ಸದಸ್ಯರು ಇದ್ದಾರೆ...! ಹುಬ್ಬೇರಿಸಬೇಡಿ. - ಇದು ಸತ್ಯ.ಸೋಮವಾರ ತಾ.ಪಂ. ಅಧ್ಯಕ್ಷೆ ರತ್ನಮ್ಮ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಅಕ್ಷರವಾಣಿ ಸಂಯೋಜಕ ಕೆ. ಶಾಂತವೀರಣ್ಣ ಈ ವಿಷಯ ಬಹಿರಂಗಪಡಿಸಿದರು.ತಾ.ಪಂ. ಅಂಕಿ-ಅಂಶಗಳ ಪ್ರಕಾರ 16 ಗ್ರಾ.ಪಂ.ಗಳಿಂದ ಒಟ್ಟು 275 ಸದಸ್ಯರು ಇದ್ದು, ಈ ಪೈಕಿ ಅನಕ್ಷರಸ್ಥ 82 ಮಹಿಳಾ ಹಾಗೂ 47 ಪುರುಷ ಸದಸ್ಯರು ಸೇರಿದಂತೆ ಒಟ್ಟು 129 ಮಂದಿ ಇದ್ದಾರೆ. ಈ ಪೈಕಿ 50 ಮಹಿಳಾ ಸದಸ್ಯರಿಗೆ ಅಕ್ಷರಜ್ಞಾನ ನೀಡಲು ಈ ತಿಂಗಳಿನಲ್ಲಿ `ಸಾಕ್ಷರ ಸನ್ಮಾನ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕೃಷಿ ಇಲಾಖೆ ಡಾ.ಕೆಂಗೇಗೌಡ ಮಾಹಿತಿ ನೀಡಿ, `ಇಲಾಖೆಯಲ್ಲಿ ಸಿಬ್ಬಂದಿ ಸಮಸ್ಯೆ ತಾರಕಕ್ಕೆ ಏರಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಲು ತೊಂದರೆಯಾಗಿದೆ. ಈ ವರ್ಷ ರಸಗೊಬ್ಬರ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲದಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಡಿಎಪಿ ರಸಗೊಬ್ಬರ ಕೊರತೆ ಉಂಟಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದಕ್ಕೆ ಪರ್ಯಾಯವಾಗಿ 12:32:16, 20:20:06, 17:17:06 ರಸಗೊಬ್ಬರ ಬಳಕೆ ಮಾಡಬಹುದು. ಉತ್ತಮ ಇಳುವರಿ ಪಡೆಯಲು ಪ್ರಥಮವಾಗಿ ಸಕಾಲಕ್ಕೆ ಬೀಜೋಪಚಾರ ಮೂಲಕ ಬಿತ್ತನೆ ಮಾಡಬೇಕು. ಇದು ವೈಜ್ಞಾನಿಕವಾಗಿ ಈಗಾಗಲೇ ಸಾಬೀತಾಗಿದೆ ಎಂದರು.ಜಿ.ಪಂ. ಎಇಇ ಸತ್ಯಪ್ಪ ಮಾತನಾಡಿ, ` 2011-12ನೇ ಸಾಲಿನ ಕುಡಿಯುವ ನೀರಿನ ಯೋಜನೆಗೆ ಒಟ್ಟು ್ಙ 12 ಕೋಟಿ ವೆಚ್ಚದ ಕ್ರಿಯಾಯೋಜನೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಟಾಸ್ಕ್‌ಪೋರ್ಸ್ ಸಮಿತಿಗೆ ಬಂದಿದ್ದ ್ಙ 15 ಲಕ್ಷ ಪೈಕಿ ಮೊಳಕಾಲ್ಮುರು ತಾಲ್ಲೂಕಿಗೆ ್ಙ 10 ಲಕ್ಷ ಹಾಗೂ ಚಳ್ಳಕೆರೆ ತಾಲ್ಲೂಕಿನ ತಳಕು, ನಾಯಕನಹಟ್ಟಿ ಹೋಬಳಿಗೆ ್ಙ 5 ಲಕ್ಷ ನೀಡಲಾಗಿದೆ.13ನೇ ಹಣಕಾಸು ಯೋಜನೆಯಲ್ಲಿ ್ಙ 41 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ, ಸಿಎಂಜಿಎಸ್‌ವೈ ಯೋಜನೆಯಲ್ಲಿ ್ಙ 67 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಜಿ.ಪಂ.ಗೆ ಸೇರಿದ ಏಳು ಕೆರೆಗಳ ಪೈಕಿ ಆರು ಕೆರೆಗಳನ್ನು ್ಙ 1.84 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಇದರ ಟೆಂಡರ್‌ನ್ನು ಸುಮಾರು ್ಙ 55 ಲಕ್ಷ ಕಡಿಮೆ ಬಿಡ್‌ಗೆ ಟೆಂಡರ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.  ತಾ.ಪಂ. ಇಒ ಬಿ.ಎಸ್. ಮಂಜುನಾಥ್, ಸದಸ್ಯ ಅಡವಿ ಮಾರಯ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry