ಭಾನುವಾರ, ಮೇ 16, 2021
27 °C

13ರ ಪೋರನ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್‌ಎಸ್): ಸತ್ಯಂ ಕುಮಾರ್ ಎಂಬ 13 ವರ್ಷದ ಬಾಲಕ ಐಐಟಿ ಜಂಟಿ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ಈ ಪರೀಕ್ಷೆ ಪಾಸು ಮಾಡಿದ ಅತಿ ಕಿರಿಯ ವಿದ್ಯಾರ್ಥಿ ಎಂಬ ಸಾಧನೆಗೆ ಪಾತ್ರವಾಗಿದ್ದಾನೆ.ಬೋಜ್‌ಪುರ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿರುವ ಸತ್ಯಂ ಕಳೆದ ವರ್ಷ 12ನೇ ತರಗತಿಯಲ್ಲಿ 679ನೇ ರ‌್ಯಾಂಕ್ ಪಡೆದು ಸಾಧನೆ ಮೆರೆದಿದ್ದನು.ಐಐಟಿ-ಜೆಇಇ ವೆಬ್‌ಸೈಟ್ ಪ್ರಕಾರ 2010ರಲ್ಲಿ 14 ವರ್ಷದ ಬಾಲಕ ಈ ಸಾಧನೆ ಮಾಡಿ ಅತಿ ಕಿರಿಯ ವಿದ್ಯಾರ್ಥಿ ಎಂಬ ದಾಖಲೆ ಬರೆದಿದ್ದನು. ಆದರೆ ಸತ್ಯಂ ಈ ದಾಖಲೆಯನ್ನು ಮುರಿದಿದ್ದಾನೆ. ಪ್ರವೇಶ ಪರೀಕ್ಷೆಯಲ್ಲಿ ಸತ್ಯಂ 8,137ನೇ ರ‌್ಯಾಂಕ್ ಪಡೆದಿದ್ದಾನೆ. `ಈ ಫಲಿತಾಂಶ ತೃಪ್ತಿಕರವಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಪರೀಕ್ಷೆ ಎದುರಿಸುತ್ತೇನೆ' ಎಂದಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.