ಭಾನುವಾರ, ಜೂನ್ 20, 2021
23 °C

13 ಎಎಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ಫೊಸಿಸ್‌ ಆಡಳಿತ ಮಂಡಳಿಯ ಮಾಜಿ ಸದಸ್ಯ ವಿ. ಬಾಲಕೃಷ್ಣನ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌,  ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ನಿವೃತ್ತ ಐಜಿಪಿ ಕೆ. ಅರ್ಕೇಶ್ ಸೇರಿದಂತೆ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್‌ ಆದ್ಮಿ ಪಕ್ಷ ಸೋಮವಾರ ಬಿಡುಗಡೆ ಮಾಡಿದೆ. ರೈತ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಭೀಮರಾಯ, ರಾಷ್ಟ್ರೀಯ ಕಾನೂನು ಶಾಲೆಯ ನಿವೃತ್ತ ಕುಲಸಚಿವ ಪ್ರೊ. ಬಾಬು ಮ್ಯಾಥ್ಯೂ, ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ನೀನಾ ಪಿ. ನಾಯಕ್‌, ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ, ಮಲೆನಾಡು ಪ್ರದೇಶದ ಪರಿಸರ ಹೋರಾಟಗಾರ ಮತ್ತು ವಾಸ್ತುಶಿಲ್ಪಿ ಜಿ. ಶ್ರೀಧರ್‌ ಕಲ್ಲಹಳ್ಳ, ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌. ವಾಸುದೇವ್‌, ಸಾಮಾಜಿಕ ಕಾರ್ಯಕರ್ತ ಅಶ್ಫಕ್ ಅಹಮದ್ ಮಡಿಕಿ, ರೈತ ಸಂಘದ ಸಂಸ್ಥಾಪಕ ಸದಸ್ಯ ಹೇಮಂತಕುಮಾರ್‌, ಎಂಜಿನಿಯರಿಂಗ್‌ ಅಧ್ಯಾಪಕ ಚಂದ್ರಕಾಂತ ಕುಲಕರ್ಣಿ, ಸಾಹಿತಿ ಮತ್ತು ದಲಿತ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಈ ಪಟ್ಟಿಯಲ್ಲಿದ್ದಾರೆ.ಕೋದಂಡರಾಮಯ್ಯಗೆ ಟಿಕೆಟ್‌ ಇಲ್ಲ: ಎಎಪಿ ಸೇರಿ ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿ­ಸಿದ್ದ ನಿವೃತ್ತ ಪೊಲೀಸ್‌ ಅಧಿ­ಕಾರಿ ಪಿ. ಕೋದಂಡರಾಮಯ್ಯ ಅವರಿಗೆ ಟಿಕೆಟ್‌ ದೊರೆತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.