13 ಜನರ ಕೊಂದು ಆತ್ಮಹತ್ಯೆ

7

13 ಜನರ ಕೊಂದು ಆತ್ಮಹತ್ಯೆ

Published:
Updated:

ವೆಲಿಕಾ ಇವಾನ್ಕಾ, ಸೈಬೀರಿಯಾ (ಎಪಿ): 60 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ, ಮಗ,  ಸಂಬಂಧಿಕರ ಎರಡೂವರೆ ವರ್ಷದ ಮಗು ಸೇರಿದಂತೆ 13 ಜನರನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ತಾನು ಸಹ ಗುಂಡು ಹೊಡೆದುಕೊಂಡು ಸತ್ತ ದಾರುಣ ಘಟನೆ ಇಲ್ಲಿ ನಡೆದಿದೆ.ಜುಬಿಸಾ ಬೊಗ್ದಾನೊವಿಕ್ ಎಂಬ ವ್ಯಕ್ತಿ ಬಂದೂಕಿನಿಂದ ತನ್ನ ಕುಟುಂಬದ ಸದಸ್ಯರು ಮತ್ತು ಅಕ್ಕಪಕ್ಕದ ಐದು ಮನೆಗಳಲ್ಲಿ ಇದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಿನ ಜಾವ ಸುಮಾರು 5 ಗಂಟೆಗೆ ಈ ದುರ್ಘಟನೆ ನಡೆದಿದ್ದು, 12 ಜನರು ಸ್ಥಳದಲ್ಲೇ ಸತ್ತಿದ್ದಾರೆ ಮತ್ತು ಒಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry