13 ವರ್ಷದ ಬಾಲಕನಿಗೆ ಥಳಿಸಿ ಹತ್ಯೆ

7

13 ವರ್ಷದ ಬಾಲಕನಿಗೆ ಥಳಿಸಿ ಹತ್ಯೆ

Published:
Updated:

ರಾಂಚಿ (ಐಎಎನ್‌ಎಸ್): ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಜವಾನನೊಬ್ಬ 13 ವರ್ಷದ ಹುಡುಗನನ್ನು ಮನಬಂದಂತೆ ಥಳಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಧನಬಾದ್‌ನಲ್ಲಿ ಶುಕ್ರವಾರ ನಡೆದಿದೆ.ಝಾರಿಯಾ ಕಲ್ಲಿದ್ದಲು ಪ್ರದೇಶದಲ್ಲಿರುವ ಬಿಸಿಸಿಎಲ್ ಕಂಪೆನಿಯ ಘಾನಾವಾಡಿ ಸಮೀಪ ಮೃತ ಬಾಲಕನ ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಕಲ್ಲಿದ್ದಲ್ಲು ಕಳವು ಮಾಡಿದ್ದ ಹಿನ್ನೆಲೆಯಲ್ಲಿ ಬಾಲಕನನ್ನು ಹಿಡಿದು ಸಿಐಎಸ್‌ಎಫ್ ಸಿಬ್ಬಂದಿ ತೀವ್ರವಾಗಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ~ ಗ್ರಾಮಸ್ಥರು ಆರೋಪಿಸಿದ್ದಾರೆ, ಆದರೆ, ಸಿಐಎಸ್‌ಎಫ್ ಆರೋಪವನ್ನು ನಿರಾಕರಿಸಿದೆ.`ಕಿಟಕಿಯಿಂದ ಜಿಗಿಯಲು ಯತ್ನಿಸಿದಾಗ ಕಬ್ಬಿಣದ ಚೂಪಾದ ಸರಳು ನಾಟಿದ್ದರಿಂದ ಬಾಲಕ ಮೃತಪಟ್ಟಿರುವುದಾಗಿ~ ಸಿಐಎಸ್‌ಎಫ್ ತಿಳಿಸಿದೆ.`ಚೂಪಾದ ಸರಳು ಹೊಂದಿದ್ದ ಕಿಟಕಿಯಿಂದ ಬಾಲಕ ಜಿಗಿಯಲು ಹೇಗೆ ಸಾಧ್ಯ ಎಂದಿರುವ ಪೊಲೀಸರು ಈ ವೇಳೆ ಸೇವೆಗೆ ನಿಯೋಜಿತನಾಗಿದ್ದ ಸಿಐಎಸ್‌ಎಫ್ ಜವಾನನ ಹೆಸರು ಹೇಳಲು ಸಿಐಎಸ್‌ಎಫ್ ಹಿಂದೇಟು ಹಾಕುತ್ತಿದೆ~ ಎಂದಿದ್ದಾರೆ.`ಹುಡುಗನ ಶರೀರದ ಮೇಲೆ ಗಂಭೀರ ಗಾಯಗಳಾಗಿರುವುದು ಕಂಡು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry