ಭಾನುವಾರ, ಏಪ್ರಿಲ್ 18, 2021
32 °C

136 ವೈದ್ಯರ ರಾಜೀನಾಮೆ: 9ರಿಂದ ಗೈರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

136 ವೈದ್ಯರ ರಾಜೀನಾಮೆ: 9ರಿಂದ ಗೈರು?

ಗುಲ್ಬರ್ಗ: ವೇತನ ಪರಿಷ್ಕರಣೆ, ಸೇವಾ ಸೌಲಭ್ಯ, ನೇಮಕಾತಿ, ಸಿಬ್ಬಂದಿ ನಿಯೋಜನೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ 136 ಸರ್ಕಾರಿ ವೈದ್ಯರು ಶನಿವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು.

 

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಆರೋಗ್ಯ ಇಲಾಖೆಯ ಆಯುಕ್ತರಿಗೆ ರಾಜೀನಾಮೆ ಪತ್ರ ಕಳುಹಿಸಿಕೊಟ್ಟರು. ಇವರಲ್ಲಿ ಜಿಲ್ಲಾಸ್ಪತ್ರೆಯ 16 ಶಸ್ತ್ರಚಿಕಿತ್ಸಕರು, ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇದ್ದರು.ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಬೇರ್ಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವ್ಯಾಪ್ತಿಗೆ ಸೇರಿಸಬೇಕು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯನ್ನು ಒಂದೇ ನಿರ್ದೇಶನಾಲಯದ ಅಡಿಗೆ ತರಬೇಕು.ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಆಧುನಿಕ ಚಿಕಿತ್ಸಕ ಸಲಕರಣೆ, ಉಪಕರಣಗಳನ್ನು ವೈದ್ಯರಿಗೆ ಪೂರೈಸಬೇಕು. ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಪ್ರತಿ ಪ್ರಾಥಮಿಕ ಕೇಂದ್ರಕ್ಕೆ ಮೂವರು (ತಲಾ 8 ಗಂಟೆ) ವೈದ್ಯರನ್ನು ನೇಮಕ ಮಾಡಬೇಕು ಎಂದು ಸಂಘದ ಕಾರ್ಯದರ್ಶಿ ಡಾ.ಎಂ.ಎಸ್.ವರ್ಮಾ ಆಗ್ರಹಿಸಿದರು. ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಕೊರತೆ ಸರಿಪಡಿಸಬೇಕು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಿಬ್ಬಂದಿ ನೆರವು ಬೇಕು. ವೈದ್ಯರಿಗೆ ಇರುವ ತಜ್ಞತೆಗೆ ತಕ್ಕಂತೆ ಕೆಲಸವನ್ನು ನೀಡಿ, ಭದ್ರತೆ ಕೊಡಬೇಕು.ಮರಣೋತ್ತರ ಪರೀಕ್ಷೆಯನ್ನು ತಾಲ್ಲೂಕು ಮೇಲ್ಪಟ್ಟ ಆಸ್ಪತ್ರೆಗಳಲ್ಲಿ ಮಾತ್ರ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜೀನಾಮೆ ಸಲ್ಲಿಸಲಾಗಿದೆ ಎಂದ ಅವರು, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ನಮಗಿಂತ ಉತ್ತಮ ಸೌಲಭ್ಯ, ಸಂಬಳ ಹಾಗೂ ಸಿಬ್ಬಂದಿ ವ್ಯವಸ್ಥೆ ಇದೆ ಎಂದರು.ಬೇಡಿಕೆ ಈಡೇರಿಸುವ ಭರವಸೆಯನ್ನು ಈ ಹಿಂದೆ ನೀಡಿದ್ದ ಸರ್ಕಾರವು ವಿಳಂಬ ನೀತಿ ಅನುಸರಿಸಿ ಕಾಲಹರಣ ಮಾಡಿದೆ. ಆ ಮೂಲಕ ವೈದ್ಯರನ್ನು ವಂಚಿಸುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಆ. 9ರಂದು  ಸೂಕ್ತ ಭರವಸೆ ದೊರಕದಿದ್ದಲ್ಲಿ ಮಾರನೇ ದಿನದಿಂದಲೇ ಕರ್ತವ್ಯಕ್ಕೆ ಗೈರಾಗಿ ದೂರ ಉಳಿಯುವುದಾಗಿ ಎಚ್ಚರಿಸಿದರು.ಅಧ್ಯಕ್ಷ ಡಾ.ಅಂಬಾರಾಯ ರುದ್ರವಾಡಿ, ಕಾರ್ಯದರ್ಶಿ ಡಾ.ಎಂ.ಎಸ್.ವರ್ಮಾ, ಡಾ.ಶರಣಬಸಪ್ಪಾ ಗಣಜಲಖೇಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.