13/7 ಸ್ಫೋಟ: ಐಎಂ ಸದಸ್ಯ ಎಟಿಎಸ್ ವಶಕ್ಕೆ

7

13/7 ಸ್ಫೋಟ: ಐಎಂ ಸದಸ್ಯ ಎಟಿಎಸ್ ವಶಕ್ಕೆ

Published:
Updated:

ಮುಂಬೈ (ಪಿಟಿಐ):  ಜುಲೈ 13ರಂದು ನಡೆದ ತ್ರಿವಳಿ ಸ್ಫೋಟ ಪ್ರಕರಣದ ಸಂಚು ರೂಪಿಸಿದ ಹಾಗೂ ಹಣಕಾಸು ನೆರವು ಒದಗಿಸಿದ್ದ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತ ಹರೂನ್ ನಾಯ್ಕನನ್ನು ಫೆಬ್ರುವರಿ 10ರವರಗೆ ಸ್ಫೋಟದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಶಕ್ಕೆ ಒಪ್ಪಿಸಲಾಗಿದೆ. ಹರೂನ್‌ನಾಯ್ಕ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೊಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.13/7 ಸ್ಫೋಟ ಪ್ರಕರಣದ ಸಂಬಂಧ ಎಟಿಎಸ್ ವಶಕ್ಕೆ ಪಡೆದುಕೊಂಡಿರುವ ನಾಲ್ಕನೇ ಆರೋಪಿ ಹರೂನ್ ನಾಯ್ಕ ಆಗಿದ್ದಾನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry