ಬುಧವಾರ, ಅಕ್ಟೋಬರ್ 16, 2019
22 °C

14ರಂದು ಟೈಕಾನ್ ಹುಬ್ಬಳ್ಳಿ-12

Published:
Updated:

ಹುಬ್ಬಳ್ಳಿ: ಉದ್ಯಮಶೀಲ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪನೆಯಾದ `ಟೈ~ ಸಂಸ್ಥೆ, ನಗರದ ದೇಶಪಾಂಡೆ ಫೌಂಡೇಶನ್ ಸಭಾಂಗ ಣದಲ್ಲಿ ಇದೇ 14ರಂದು ಒಂದು ದಿನದ ಉದ್ಯಮಶೀಲತಾ ಕಾರ್ಯಾಗಾರ `ಟೈಕಾನ್ ಹುಬ್ಬಳ್ಳಿ-2012~ ಅನ್ನು ಆಯೋಜಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಬುಧವಾರ `ಟೈ~ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷ ನವೀನ್ ಝಾ ಮತ್ತು ಕಾರ್ಯ ದರ್ಶಿ ಡಾ. ಪಿ.ಬಿ.ರೂಡಗಿ ಕಾರ್ಯಾ ಗಾರದ ವಿವರವನ್ನು ನೀಡಿದರು.`ಉದ್ಯಮಶೀಲ ವ್ಯಕ್ತಿತ್ವವನ್ನು ರೂಪಿಸಲು ಆಯೋಜಿಸಲಾದ ಈ ಕಾರ್ಯಾಗಾರವು ಯುವ ಸಾಹಸಿಗಳ ಉದ್ಯಮ ಸ್ಥಾಪನೆ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶ ಸೃಷ್ಟಿಸಲಿದೆ~ ಎಂದ ಅವರು, ಯಶಸ್ವಿ ಉದ್ಯಮಿಗಳ ಮಾರ್ಗದರ್ಶನದ ಜತೆಗೆ ಉದ್ಯಮ ಸ್ಥಾಪನೆಗೆ ಬೇಕಾದ ಸಮಗ್ರ ಮಾಹಿ ತಿಯೂ ಕಾರ್ಯಾಗಾರದಲ್ಲಿ ದೊರೆ ಯಲಿದೆ~ ಎಂದು ತಿಳಿಸಿದರು.`ಬೆಳಿಗ್ಗೆ 9ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಇನ್ಫೋಸಿಸ್ ಟೆಕ್ನಾ ಲಜಿಸ್ ಸಂಸ್ಥೆ ಮಾಜಿ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ನಡೆ ಯುವ ಸಂವಾದ ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳ ಪ್ರಶ್ನೆಗಳಿಗೆ ಸೈಕಾ ಮೋರ್ ನೆಟ್‌ವರ್ಕ್ಸ್ ಇಂಕ್ ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ಉತ್ತರಿಸಲಿದ್ದಾರೆ~ ಎಂದು ಅವರು ಹೇಳಿದರು.`ಅಸ್ಟ್ರಾಕ್ ಸಮೂಹದ ಅಧ್ಯಕ್ಷ ಕಿಶೋರ್ ಮುಸಳೆ, ವಿಆರ್‌ಎಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಜಯ ಸಂಕೇಶ್ವರ ತಮ್ಮ ಯಶಸ್ಸಿನ ಕಥೆಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಮೆರಟ್ರಾಕ್ ಸಂಸ್ಥೆಯ ಸಹ ಸಂಸ್ಥಾಪಕ ಮದನ ಪದಕಿ ಹಾಗೂ ಅಮಿತ ಕುಮಾರ್ ಸೃಜನಾತ್ಮಕ ಪ್ರತಿಭೆ ವಿಷ ಯವಾಗಿ ಮಾತನಾಡುತ್ತಾರೆ~ ಎಂದು ಅವರು ವಿವರಿಸಿದರು.`ಮಹಿಳಾ ಉದ್ಯಮಶೀಲತೆ ವಿಷಯ ವಾಗಿ ಎಸ್.ಸಾವಿತ್ರಿ, ಅಂಜು ಮುದ ಗಲ್, ಯಶಸ್ವಿನಿ ರಾಮಸ್ವಾಮಿ, ಮಾನಸಾ ಕುಮಾರ್ ಚರ್ಚಿಸಲಿದ್ದಾರೆ. ಧನಸಹಾಯ ಮತ್ತು ಮೌಲ್ಯಗಳ ರೂಪಣೆ ಕುರಿತು ಹಣಕಾಸು ತಜ್ಞ ರಾದ ಅಂಶು ಶ್ರೀವಾತ್ಸವ ಮತ್ತು ಸಮೀರ್‌ಕುಮಾರ್ ವಿವರಿಸಲಿದ್ದಾರೆ. ಪುಣೆ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಆನಂದ ಖಾಂಡೇಕರ್ ಪುಣೆ ಉದ್ಯಮ ಕ್ಷೇತ್ರ ಬೆಳೆದ ಬಗೆಯನ್ನು ತಿಳಿಸಲಿದ್ದಾರೆ~ ಎಂದು ಅವರು ಹೇಳಿದರು.`ರಾಜ್ಯ ಸರ್ಕಾರ ಉದ್ಯಮಶೀಲ ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಕೈಗೊಂಡ ಕ್ರಮಗಳನ್ನು ಸಚಿವ ಜಗದೀಶ ಶೆಟ್ಟರ, ಜಿಲ್ಲಾಧಿಕಾರಿ ದರ್ಪಣ ಜೈನ್ ಮತ್ತು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ವಿವರಿಸಲಿದ್ದು, ಕರ್ನಾಟಕ ವಾಣಿ ಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ ಪಾಲ್ಗೊಳ್ಳಲಿದ್ದಾರೆ~ ಎಂದು ತಿಳಿಸಿದರು.`ಟೈ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭ ಸಂಜೆ ನಡೆಯಲಿದ್ದು, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಾ ಗಾರದಲ್ಲಿ ಪಾಲ್ಗೊಳ್ಳಲು ವಿ.ಕೆ. ಮಹೇಶ (9448154063, 974 3331842) ಅವರನ್ನು ಸಂಪ ರ್ಕಿಸಬಹುದು~ ಎಂದು ಹೇಳಿದರು.

ಶೇಷಗಿರಿ ಕುಲಕರ್ಣಿ ಹಾಗೂ ವಿ.ಕೆ. ಮಹೇಶ ಪತ್ರಿಕಾಗೋಷ್ಠಿಯಲ್ಲಿ ಹಾಜ ರಿದ್ದರು.

Post Comments (+)