ಸೋಮವಾರ, ಜನವರಿ 20, 2020
20 °C

14ರಂದು ಬಾಮ್‌ಸೆಫ್‌ ರಾಜ್ಯ ಅಧಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಖಿಲ ಭಾರತ ಹಿಂದುಳಿದ (ಎಸ್‌ಸಿ,ಎಸ್‌ಟಿ, ಓಬಿಸಿ) ಅಲ್ಪಸಂಖ್ಯಾತರ ಸಮುದಾಯದ ಉದ್ಯೋಗಿಗಳ ಒಕ್ಕೂಟದ (ಭಾಮ್‌ಸೆಫ್‌) ರಾಜ್ಯ ಮಟ್ಟದ ಅಧಿವೇಶನವು ಡಿ. 14ರಂದು ಗುಲ್ಬರ್ಗದಲ್ಲಿ ನಡೆಯಲಿದೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್‌ ಶೀಲವಂತ ಹೇಳಿದರು.ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಅಧಿವೇಶನ ನಡೆಯುವುದು. ಕೋರ್ಣೇಶ್ವರ ಮಠದ ವಿಶ್ವನಾಥ ಅಪ್ಪಾ ಅವರು ಅಧಿವೇಶನ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಒಕ್ಕೂಟದ ರಾಷ್ಟ್ರೀಯ ಘಟಕದ ಅಧ್ಯಕ್ಷ ವಾಮನ್‌ ಮೆಶ್ರಾಮ್‌ ಅಧ್ಯಕ್ಷತೆ ವಹಿಸುವರು.ಬೀದರ್‌ನ ಶೇಖ್‌ ವಾಹಿದ್‌ ಲಖನ್‌, ಬೆಂಗಳೂರಿನ ಇಕ್ಬಾಲ್‌ ಅಹ್ಮದ್‌ ಶರೀಫ್‌, ಸೋಲ್ಲಾಪುರದ ಮುಫ್ತಿ ಅಹ್ಮದ್‌ ಯೂಸುಫ್‌, ಡಾ. ಮೀನಾಕ್ಷಿ ಬಾಳಿ, ಸಂಜಯ ಮಾಕಲ್‌, ಡಾ. ಶಿವರಾಜ ಸಜ್ಜನಶೆಟ್ಟಿ, ಶಿವಾನಂದ ಹುಗ್ಗಿ ಪಾಟೀಲ, ಎಸ್‌. ಸಿದ್ಧಿರಾಜು, ಸಲಾವುದ್ದೀನ್‌ ಪುಣೇಕರ್‌, ಡಾ. ಪಾಂಡುರಂಗ ಪೂಜಾರಿ, ಪ್ರೊ. ಮಲ್ಲಪ್ಪ ಮಾನೆಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.ಲಿಂಗಾಯತ ಒಂದು ಸ್ವತಂತ್ರ ಧರ್ಮ, ಬ್ರಾಹ್ಮಣರ ಭಂಕ್ತಿಪಂಥ ಅಲ್ಲ. ದಕ್ಷಿಣ ಭಾರತದಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆ ವಿರುದ್ಧ ನಡೆದ ಬಹುದೊಡ್ಡ ಆಂದೋಲನ ಎನ್ನುವ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಅಧಿವೇಶನದಲ್ಲಿ ‘ಡಾ. ಅಂಬೇಡ್ಕರ್‌ ಹತ್ಯೆ ಯಾರು?ಏಕೆ? ಹೇಗೆ? ಮಾಡಿದರು’ ಮೂರು ಸಂಪುಟಗಳನ್ನು ಬಿಡುಗಡೆ ಮಾಡಲಾಗುವುದು.ವಿಲಾಸ್‌ ಖಾರತ್‌ ಮೂಲ ಲೇಖಕರಾಗಿದ್ದು, ಡಾ. ಜೆ.ಪಿ. ದೊಡ್ಡಮನಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದರು. ವಿಶ್ವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ವಿಶ್ವನಾಥ ಕೋರ್ಣೇಶ್ವರ ಅಪ್ಪಾ, ಬಾಮ್‌ಸೆಫ್‌ ದಕ್ಷಿಣ ಭಾರತ ಸಂಚಾಲಕ ಕುಮಾರ ಕಾಳೆ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ರಾವೂರ್‌, ವೆಂಕಟೇಶ ದೊರೆಪಲ್ಲಿ, ಗುರಣ್ಣ ಐನಾಪುರ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)