ಬುಧವಾರ, ಅಕ್ಟೋಬರ್ 16, 2019
26 °C

14ರಿಂದ ಗುರು ಸಿದ್ದರಾಮೇಶ್ವರ ಜಯಂತಿ

Published:
Updated:

ಬೆಂಗಳೂರು: `ಗುರು ಸಿದ್ದರಾಮೇಶ್ವರರ ಜಯಂತಿ ಮಹೋತ್ಸವವನ್ನು ಜ. 14 ರಿಂದ ಎರಡು ದಿನಗಳ ಕಾಲ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆರೆಗೋಡಿಯಲ್ಲಿ ನಡೆಸಲಾಗುವುದು~ ಎಂದು ನೊಳಂಬ ವೀರಶೈವ ಸಂಘದ ಅಧ್ಯಕ್ಷ ಕೆ.ಎನ್.ಚಂದ್ರಶೇಖರಯ್ಯ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಮಾಜ ಪರಿವರ್ತಕನನ್ನು ಇಂದು ನೆನೆದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ~ ಎಂದರು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃಷಿ ವಸ್ತು ಪ್ರದರ್ಶನ, ಸಾಹಿತ್ಯ ಗೋಷ್ಠಿ, ಕವಿ ಗೋಷ್ಠಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ~ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ರಾಮಲಿಂಗಪ್ಪ, ಕಾರ್ಯದರ್ಶಿ ಎಚ್.ಬಿ.ದಿವಾಕರ್   ಉಪಸ್ಥಿತರಿದ್ದರು.

Post Comments (+)