14ರಿಂದ ಬಹುರೂಪಿ ನಾಟಕೋತ್ಸವ

7

14ರಿಂದ ಬಹುರೂಪಿ ನಾಟಕೋತ್ಸವ

Published:
Updated:

ಮೈಸೂರು: ನಗರದ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋ­ತ್ಸವ (ಜ. 14–20)ಕ್ಕೆ ಸಜ್ಜಾಗುತ್ತಿದೆ.ರಂಗಾಯಣದ ಆವರಣದಲ್ಲಿರುವ ಬೊಮ್ಮನಹಳ್ಳಿ ಕಿಂದರಿಜೋಗಿ ಪ್ರತಿ­ಮೆಗೆ ಬಣ್ಣ ಬಳಿಯಲಾಗಿದ್ದು, ರಂಗಾ­ಸಕ್ತರನ್ನು ಸೆಳೆಯುತ್ತಿದೆ. 22 ವರ್ಷಗಳ ಹಿಂದೆ ನಿರ್ಮಿ­­­ಸ­ಲಾ­ಗಿದ್ದು, 22 ಅಡಿ ಎತ್ತರ­ವಿದೆ. ‘ರಂಗಾ­ಯಣದ ನಿರ್ದೇಶಕರಾ­ಗಿದ್ದ ಬಿ.ವಿ. ಕಾರಂತರು ಕುವೆಂಪು ಅವರ ಬೊಮ್ಮ­ನ­ಹಳ್ಳಿ ಕಿಂದರಿಜೋಗಿ ನಾಟಕ­ವನ್ನು ನಿರ್ದೇಶಿಸಿದ್ದರು. ಅದೇ ವರ್ಷ ಜಂಬೂ­ಸವಾರಿಯಂದು ರಂಗಾ­ಯ­ಣದ ಸ್ತಬ್ಧ­ಚಿತ್ರ ಇರಬೇಕೆಂದಾಗ 14 ಅಡಿ ಎತ್ತ­ರದ ಕಿಂದರಿಜೋಗಿಯ ಸ್ತಬ್ಧ­ಚಿತ್ರವನ್ನು ನಿರ್ಮಿಸಲಾಯಿತು. ನಂತರ ಅದನ್ನು ರಂಗಾಯಣದ ಆವರ­ಣ­ದಲ್ಲಿ­ಡಲಾ­ಗಿತ್ತು. ಕಾರ್ಯಕ್ರಮ­ಗಳಿಗೆ ಬಳಸಿ­ಕೊಳ್ಳ­ಲಾಯಿತು’ ಎಂದು ಮೆಲುಕು ಹಾಕು­ತ್ತಾರೆ ರಂಗಾಯಣದ ಶಿಕ್ಷಕ ದ್ವಾರ್ಕಿ (ಎಚ್‌.ಆರ್‌. ದ್ವಾರಕಾ­ನಾಥ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry