ಸೋಮವಾರ, ಅಕ್ಟೋಬರ್ 14, 2019
24 °C

14 ಅರೆಸೇನಾ ಪಡೆ ಸೈನಿಕರ ಸಾವು

Published:
Updated:

ಬಲೂಚಿಸ್ತಾನ (ಪಿಟಿಐ): ವಾಯವ್ಯ ಪಾಕಿಸ್ತಾನದ ಬಲೂಚಿಸ್ತಾನದ ತುರ್ಬತ್ ಜಿಲ್ಲೆಯ ನವಾನೊ ಎಂಬಲ್ಲಿ ಬುಧವಾರ ರಾತ್ರಿ ಉಗ್ರರು ನಡೆಸಿದ ದಾಳಿಗೆ 14 ಅರೆಸೇನಾ ಪಡೆಯ ಸೈನಿಕರು ಮೃತಪಟ್ಟಿದ್ದಾರೆ.

`ಬೆಟ್ಟಗಳಲ್ಲಿ ಅಡಗಿದ್ದ ಉಗ್ರರು ಕಾವಲು ನಡೆಸುತ್ತಿದ್ದ  ಸೈನಿಕರ ಮೇಲೆ ರಾಕೆಟ್ ಮತ್ತು ಕ್ಷಿಪಣಿಗಳ ಮೂಲಕ ದಿಢೀರ್ ದಾಳಿ ನಡೆಸಿದರು. ಒಮ್ಮಿಂದೊಮ್ಮೆಗೇ ಬೆಟ್ಟದ ಮೇಲಿಂದ ಮೂರು ಕಡೆಗಳಲ್ಲಿ ಈ ದಾಳಿ ನಡೆಯಿತು. ಇದರ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಷನ್ ಫ್ರಂಟ್ ಸಂಘಟನೆಯು ಹೊತ್ತುಕೊಂಡಿದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)