ಗುರುವಾರ , ಜೂನ್ 24, 2021
29 °C
ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ

14 ಎಎಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಖನೌ ಹಾಗೂ ನವದೆಹಲಿಯಲ್ಲಿ ಬುಧವಾರ ಎಎಪಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಬೀದಿ ಕಾಳಗಕ್ಕೆ  ಸಂಬಂಧಿಸಿದಂತೆ ಎಎಪಿಯ ಪ್ರಮುಖ ನಾಯಕರಾದ ಅಶುತೋಷ್‌ ಹಾಗೂ ಶಾಜಿಯಾ ಇಲ್ಮಿ ಅವರ ವಿರುದ್ಧ ಇಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗಿದೆ.ಇದಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದಡಿ ಎಎಪಿಯ 14 ಜನರನ್ನು ಗುರುವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಘಟನೆಯಲ್ಲಿ ಎಎಪಿಯ 13 ಹಾಗೂ ಬಿಜೆಪಿಯ 10 ಕಾರ್ಯಕರ್ತರು ಸೇರಿದಂತೆ 28 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಮ್ಮ ಕಡೆಯ ಕಾರ್ಯಕರ್ತರನ್ನು ಮಾತ್ರ ಬಂಧಿಸಿದ ಪೊಲೀಸರ ಕ್ರಮಕ್ಕೆ ಎಎಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿ ಒಳಗಿ­ನಿಂದಲೂ ಕಲ್ಲು, ಕುರ್ಚಿಗಳನ್ನು ತೂರಿದ್ದರೂ ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.ನೋಟಿಸ್‌ ಜಾರಿ: ಈ ನಡುವೆ ಗಲಾಟೆಗೆ ಸಂಬಂಧಿಸಿದಂತೆ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾ ಕಚೇರಿಯಿಂದ ಎಎಪಿಗೆ ನೋಟಿಸ್‌ ನೀಡಲಾಗಿದೆ.ನೋಟಿಸ್‌ಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಒಳಗೆ ವಿವರಣೆ ನೀಡುವಂತೆ ಚುನಾವಣಾ ಅಧಿಕಾರಿಯೂ ಆಗಿರುವ ನವದೆಹಲಿ ಜಿಲ್ಲಾಧಿಕಾರಿ ಅಮೆಯಾ ಅಭಯಂಕರ್‌ ತಿಳಿಸಿದ್ದಾರೆ.ಸಿಸೋಡಿಯ ಆರೋಪ: ಗುಜರಾತ್‌ ಪೊಲೀಸರು ತಮ್ಮ ವಿರುದ್ಧ  ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಎಎಪಿ ಮುಖಂಡ ಮನೀಷ್‌ ಸಿಸೋಡಿಯ ಆರೋಪಿಸಿದ್ದಾರೆ. ಈ ನಡುವೆ ಸಿಸೋಡಿಯ ಕಾರಿನ ಮೇಲೆ ಸಿಬರ್‌ಕಾಂತ ಜಿಲ್ಲೆಯಲ್ಲಿ ದಾಳಿ ನಡೆದಿದ್ದು, ದಾಳಿಕೋರರು ಬಿಜೆಪಿ ಕಡೆಯವರು ಎಂದು ಎಎಪಿ ಆರೋಪಿಸಿದೆ.ಕ್ಷಮೆಯಾಚಿಸಿದ ಕೇಜ್ರಿವಾಲ್‌

ಭುಜ್‌ (ಗುಜರಾತ್‌) (ಪಿಟಿಐ):
ಲಖನೌ ಹಾಗೂ ನವದೆಹಲಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಇಳಿದ ಬಗ್ಗೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಕ್ಷಮೆ ಯಾಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.