ಶನಿವಾರ, ಮೇ 15, 2021
24 °C

14 ರಂದು ಪ್ರಜಾ ಪ್ರಗತಿ ರಂಗ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ರಾಜ್ಯದಲ್ಲಿ ಮುಸ್ಮಿಮರೂ ಸೇರಿದಂತೆ ಇತರೆ ಹಿಂದುಳಿದ ಸಮಾಜಗಳ ಹಿತ ಕಾಪಾಡಲು ಪ್ರಜಾ ಪ್ರಗತಿ ರಂಗ ರಾಜಕೀಯ ಪಕ್ಷ ಏ. 14ರಂದು ಉಗಮವಾಗಲಿದೆ ಎಂದು ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ತಿಳಿಸಿದರು.ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯಗೊಂಡು 65 ವರ್ಷ ಆದರೂ ಹಿಂದುಳಿದ ಸಮಾಜ ಮತ್ತು ಅಲ್ಪಸಂಖ್ಯಾತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಂಡಿಲ್ಲ.

 

ಈ ಸಮಾಜವನ್ನು ಮೇಲೆತ್ತಲು ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಆಸಕ್ತಿ ಇಲ್ಲ. ರಾಜಕೀಯ ಪಕ್ಷಗಳಿಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಜನರು ನೆನಪಿಗೆ ಬರುವುದು ಕೇವಲ ಚುನಾವಣೆ ಸಮಯದಲ್ಲಿ ಎಂದು ಅವರು ಹೇಳಿದರು.ದೇಶದಲ್ಲಿ 20 ಕೋಟಿ ಮುಸಲ್ಮಾನರಿದ್ದು, ಈ ವರ್ಗದವರ ಹಿತ ಕಾಪಾಡುವ ಬಗ್ಗೆ ನಮ್ಮ ಸಮಾಜಕ್ಕೆ ಸೇರಿದ ಜನಪ್ರತಿನಿಧಿಗಳು ವಿಧಾನಸೌಧ ಅಥವಾ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿಲ್ಲ.  ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಕಾಲ ಕೂಡಿ ಬಂದಿದೆ. ಎಸ್‌ಡಿಪಿಐ ಮತ್ತು ಆರ್‌ಪಿಐ ಸಂಯುಕ್ತವಾಗಿ ಹೊಸ ರಾಜಕೀಯ ಪಕ್ಷ ಕಟ್ಟಿ ಬೆಳೆಸಲು ಮುಂದಾಗಿವೆ ಎಂದರು.ಆರ್‌ಪಿಐ ಪಕ್ಷದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹುನಾನ್, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಡಾ.ನಾಜಿಯಾ ಬೇಗಂ, ಜಿಲ್ಲಾಧ್ಯಕ್ಷ ಮಹಮದ್‌ಫೈಜಲ್, ಶಬ್ಬು ಅಹಮದ್, ಅಲ್ತಾಫ್ ಹುಸೇನ್ ಮತ್ತು ಗೋಪಾಲಕೃಷ್ಣ. ಹುಣಸೂರು ಘಟಕದ ಅಧ್ಯಕ್ಷ ಇಮ್ತಿಯಾಜ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.