ಗುರುವಾರ , ನವೆಂಬರ್ 21, 2019
20 °C
ಎಚ್.ಡಿ.ಕೋಟೆ: ಒಮ್ಮೆಯೂ ಅರಳದ ಕಮಲ

14 ವರ್ಷ ವನವಾಸದ ಬಳಿಕ ಒಲಿದ `ಸಚಿವ' ಸ್ಥಾನ!

Published:
Updated:

ಮೈಸೂರು: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರವು 1962 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ `ಕಮಲ' ಒಂದು ಬಾರಿಯೂ ಅರಳಿಲ್ಲ.1962 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್.ಪೀರಣ್ಣ ಅವರು 1967 ಹಾಗೂ 1972 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜೇತರಾಗಿದ್ದರು. ಈ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದರು. ಇವರನ್ನು ಹೊರತು ಪಡಿಸಿದರೆ ಮೂರು ಅವಧಿಗೆ ಗೆದ್ದವರು ಯಾರೂ ಇಲ್ಲ. ಪೀರಣ್ಣ ಅವರ ಮಗ ಎಂ.ಪಿ.ವೆಂಕಟೇಶ್ ಹಾಗೂ ಎಂ.ಶಿವಣ್ಣ ತಲಾ ಎರಡು ಅವಧಿಗೆ ಗೆಲುವು ಸಾಧಿಸಿದ್ದಾರೆ. ಆದರೆ, ಸಚಿವ ಸ್ಥಾನ ಒಲಿದಿದ್ದು ಎಂ.ಶಿವಣ್ಣ ಅವರಿಗೆ ಮಾತ್ರ.1985 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಎಂ.ಶಿವಣ್ಣ 26,286 ಮತಗಳನ್ನು ಪಡೆದು ಜನತಾಪಕ್ಷದ ಎಚ್.ಬಿ.ಚೆಲುವಯ್ಯ ಅವರನ್ನು ಮಣಿಸಿದ್ದರು. 1989 ರಲ್ಲಿ ಎಂ.ಪಿ.ವೆಂಕಟೇಶ್ ಹಾಗೂ 1994ರಲ್ಲಿ ಎನ್.ನಾಗರಾಜು ವಿರುದ್ಧ ಪರಾಭವಗೊಂಡರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ 15,868 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಎಸ್.ಎಂ.ಕೃಷ್ಣ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು.ಏಕೈಕ ಮಹಿಳೆ: ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಏಕೈಕ ಮಹಿಳೆ ಸುಶೀಲಾ ಚೆಲುವರಾಜ್. 1978 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇವರು ಜನತಾಪಕ್ಷದ ಎಚ್.ಬಿ.ಚೆಲುವಯ್ಯ ಅವರನ್ನು 11,160 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 1983 ರಲ್ಲಿ ಮತ್ತೆ ಕಣಕ್ಕೆ ಇಳಿದರಾದರೂ ಚೆಲುವಯ್ಯ ವಿರುದ್ಧವೇ ಬರೋಬ್ಬರಿ 20,188 ಮತಗಳ ಅಂತರದಿಂದ ಸೋಲು ಅನುಭವಿಸಿದರು.ಕಣದಲ್ಲಿ ಇದ್ದವರು ಯಾರ‌್ಯಾರು?

2008- ಎಂ.ಸಿ.ದೊಡ್ಡನಾಯ್ಕ, ಜಿ.ಎನ್. ದೇವದತ್ತ, ಬಿ.ಕಾವೇರ, ಸೋಮಣ್ಣ, ಎಂ.ಅಪ್ಪಣ್ಣ, ಮಂಜುಳಾ ರಾಜು, ಜಾಜಿ,   ಎಸ್.ಸ್ವಾಮಿ, ಎಚ್.ಎಸ್.ನಾಗಾನಾಯ್ಕ,  ಎಚ್.ಡಿ.ಬಸವರಾಜು, ಶಿವರಾಜ್.

2004- ಎಂ.ಶಿವಣ್ಣ, ವಿಜಯಲಕ್ಷ್ಮಿಸಿಂಗ್, ಸಿ.ವೀರರಾಜು, ಚೌಡಳ್ಳಿ ಜವರಯ್ಯ, ಎಂ.ಶಿವನಾಗರಯ್ಯ.

1999- ಸಿ.ನಂಜುಂಡಮೂರ್ತಿ, ದೇವ ನೂರು ಶಿವಮಲ್ಲು, ಎಂ.ಶಿವನಾಗರಯ್ಯ, ಬಿ.ಪ್ರಕಾಶ್, ಜವರಯ್ಯ, ಎನ್.ನಂಜಯ್ಯ.

1994- ಸಿ.ನಂಜುಂಡಮೂರ್ತಿ, ಎಚ್. ಆರ್.ನಾರಾಯಣ, ಬಿ.ರಾಧಾ, ಎಸ್. ರಾಮಯ್ಯ, ಎಚ್.ಎಸ್.ದೇವರಾಜು, ಚನ್ನಯ್ಯ, ಬಿ.ಡಿ.ಗೋವಿಂದರಾಜು.

1989- ಎಚ್.ಬಿ.ಚೆಲುವಯ್ಯ, ಪುಷ್ಪಾವತಿ, ಬಿ.ಮಾದಯ್ಯ, ವಿಜಯೇಂದ್ರ, ಎನ್.ನಾಗರಾಜು, ಎಚ್.ಟಿ.ಕೂಸಯ್ಯ.

1985- ಎಂ.ಪಿ.ವೆಂಕಟೇಶ್, ಬಿ.ಕೆ.ಬೆಟ್ಟಯ್ಯ, ಬಿ.ಎನ್.ಚೆಲುವರಾಜು, ವಿ.ರೋಸಯ್ಯ, ಚನ್ನಯ್ಯ.

1983- ಎನ್.ನಾಗರಾಜು, ಎಂ.ಶಿವಣ್ಣ, ಸಿ.ತಿಮ್ಮಯ್ಯ, ಎಸ್.ರಾಮಸಿಂಗಯ್ಯ,  ಎಲ್.ಎಂ.ಗೋವಿಂದಸ್ವಾಮಿ, ಬಿ.ಕೆ.ಬೆಟ್ಟಯ್ಯ.

ಪ್ರತಿಕ್ರಿಯಿಸಿ (+)