147 ಆರೋಪಿಗಳ ಬಂಧನ: ರೂ. 4.4 ಕೋಟಿ ಜಪ್ತಿ

7

147 ಆರೋಪಿಗಳ ಬಂಧನ: ರೂ. 4.4 ಕೋಟಿ ಜಪ್ತಿ

Published:
Updated:

ಬೆಂಗಳೂರು: ಕಳವು, ದರೋಡೆ ಸೇರಿದಂತೆ ಮೂರು ತಿಂಗಳ ಅವಧಿಯಲ್ಲಿ 194 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ ಉತ್ತರ ವಿಭಾಗದ ಪೊಲೀಸರು, 147 ಆರೋಪಿಗಳನ್ನು ಬಂಧಿಸಿ ₨ 4.4 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.‘ಬಂಧಿತರಿಂದ ಐದು ಕೆ.ಜಿ ಚಿನ್ನಾಭರಣ, ಏಳೂವರೆ ಕೆ.ಜಿ ಬೆಳ್ಳಿಯ ವಸ್ತುಗಳು, 51 ಲಕ್ಷ ನಗದು, 100 ಬೈಕ್‌ಗಳು, 17 ಆಟೊ, 18 ಕಾರುಗಳು, 37 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬ್ಬಂ ದಿಯ ಈ ಕಾರ್ಯ ಶ್ಲಾಘನೀಯ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಪ್ರಶಂಸೆ ವ್ಯಕ್ತಪಡಿಸಿದರು.ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಂಧಿತ ರಿಂದ ವಶಪಡಿಸಿಕೊಂಡ ಮಾಲುಗಳನ್ನು ವಾರಸು ದಾರರಿಗೆ ಹಸ್ತಾಂತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry