ಸೋಮವಾರ, ಜನವರಿ 27, 2020
27 °C

1,475 ಜನರಿಗೆ ಒಂದೇ ಶೌಚಾಲಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1,475 ಜನರಿಗೆ ಒಂದೇ ಶೌಚಾಲಯ!

ಕಾಳಗಿ: ಒಂದೇ ಸೂರಿನಡಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ಶೌಚಾ­ಲಯವಿದ್ದು, ನೀರಿಲ್ಲದೆ ಗಬ್ಬುನಾಥ ಬೀರುತ್ತಿದೆ.ಇದು ಇಲ್ಲಿನ ಶಾಲಾ ಮಕ್ಕಳ ಶೌಚಾ­ಲ­ಯದ ಸ್ಥಿತಿ. 1,475 ಜನರಿಗಿರುವ ಏಕೈಕ ಶೌಚಾಲಯ ಇದಾಗಿದೆ.

ಸ್ಥಳ ಕೊರತೆಯಿಂದ ಅನೇಕ ವರ್ಷ­ಗಳಿಂದ ಒಂದೇ ಕಟ್ಟಡದಲ್ಲಿ ನಡೆಯುತ್ತಿ­ರುವ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪಾಲಿಟೆಕ್ನಿಕ್ ಈ ಮೂರು ಶೈಕ್ಷಣಿಕ ವಿಭಾಗಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಇದೆ. ಪ್ರೌಢಶಾಲೆಯಲ್ಲಿ 422 ಮಕ್ಕಳು, 20ಜನ ಶಿಕ್ಷಕರು, ಪಿಯುನಲ್ಲಿ 487 ವಿದ್ಯಾರ್ಥಿಗಳು, 15 ಜನ ಉಪನ್ಯಾಸಕರು ಹಾಗೂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 500 ವಿದ್ಯಾರ್ಥಿಗಳು, 33 ಜನ ಸಿಬ್ಬಂದಿ ಇದ್ದಾರೆ. ಎಲ್ಲರೂ ಸೇರಿದರೆ ಸಂಖ್ಯೆ 1,475 ದಾಟುತ್ತದೆ. ಅಷ್ಟೂ ಜನರಿಗೆ ಇರುವುದು ಒಂದೇ ಶೌಚಾಲಯ.ಮಲಮೂತ್ರ ವಿಸರ್ಜನೆಗೆ ‘ವ್ಯವಸ್ಥಿತ ಶೌಚಾಲಯ’ ಪರದಾಡು­ತ್ತಿದ್ದಾರೆ. 2011– 12ನೇ ಸಾಲಿನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಯೋಜನೆಯಡಿ ಮಂಜೂರಾದ ₨ 1.53 ಲಕ್ಷ ವೆಚ್ಚದ ಶೌಚಾಲಯ ಒಂದೂ ಹನಿ ನೀರಿಲ್ಲದೆ ವಾಸನೆ ಬರುತ್ತಿದೆ.

ನೀರಿಗಾಗಿ ಅಳವಡಿಸಿದ ಟ್ಯಾಂಕ್‌ಗೆ ನೀರು ಸರಬರಾಜಿಲ್ಲ. ಶೌಚಾಲಯ­ಯದಲ್ಲಿ ಹಾಕಲಾದ ಕಲ್ಲು ಕಿತ್ತು ಹೋಗಿವೆ. ಮೂತ್ರ ಹರಿದು ಹೋಗದ ಸ್ಥಿತಿಯಿದೆ.ಪುರುಷರು ಹೊರಭಾಗದ ಬಯಲು ಪ್ರದೇಶಕ್ಕೆ ಹೋದರೆ, ಮಹಿಳೆ­­ಯರು ನೀರಿನ ಬಾಟಲಿ ತುಂಬಿ­ಕೊಂಡು ಮೂತ್ರ ವಿಸರ್ಜನೆಗೆ ಹೋಗುವುದು ಅನಿವಾರ್ಯ ಎನ್ನುತ್ತಾರೆ ಇಲ್ಲಿನ ಶಿಕ್ಷಕಿಯರು.ಹಿಂದಿನ ಶಾಸಕ ಸುನೀಲ ವಲ್ಯಾಪುರೆ ಗಮನಕ್ಕೆ ತಂದಾಗ ಶೌಚಾಲಯ ಕಟ್ಟಡಕ್ಕೆ ₨ 3 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದರು.

ಶಾಸಕ ಡಾ.ಉಮೇಶ ಜಾಧವ ₨ 6 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾಗಿ ಹೇಳುತ್ತಾರೆ. ಆದರೆ, ಕೆಲಸ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)