ಸೋಮವಾರ, ನವೆಂಬರ್ 18, 2019
25 °C

15ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

Published:
Updated:

ಬೆಂಗಳೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇದೇ 15ರಿಂದ ಆರಂಭವಾಗಲಿದೆ. ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಬೇಕಿರುವ ಶಿಕ್ಷಕರ ಜಿಲ್ಲಾವಾರು ಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರಿಗೆ ಕಳುಹಿಸಿದೆ.ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮ 28 ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ನಿಯಮಗಳು-2012ರ ನಿಯಮ 16 ಉಪ ನಿಯಮ 8ರ ಪ್ರಕಾರ ನಿಯೋಜಿತ ಶಿಕ್ಷಕರೆಲ್ಲರಿಗೂ ಪರೀಕ್ಷಾ ಮೌಲ್ಯಮಾಪನ ಕಡ್ಡಾಯ. ಹೆರಿಗೆ, ಗರ್ಭಪಾತ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ವಿನಾಯಿತಿ ಇದ್ದು, ಅಂತಹವರು ಕಡ್ಡಾಯವಾಗಿ ವೈದ್ಯಕೀಯ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಮೌಲ್ಯಮಾಪನಕ್ಕೆ ಗೈರು ಹಾಜರಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ನಿರ್ದೇಶಕ ಡಿ.ವೆಂಕಟೇಶಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)