15ರಿಂದ ನವರಾತ್ರಿ ಸಾಂಸ್ಕೃತಿಕ ಉತ್ಸವ

7

15ರಿಂದ ನವರಾತ್ರಿ ಸಾಂಸ್ಕೃತಿಕ ಉತ್ಸವ

Published:
Updated:

ತುಮಕೂರು: ನಗರದ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಅ. 15ರಿಂದ 24ರ ವರೆಗೆ 13ನೇ ವರ್ಷದ ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಜಿ.ವಿಶ್ವನಾಥ ಶೆಟ್ಟಿ ತಿಳಿಸಿದರು.ನಾಡಿನ ಖ್ಯಾತ ವಿದ್ವಾಂಸರಿಂದ ದೇವಾಲಯದ ಆವರಣದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಸಂಗೀತ, ನೃತ್ಯ, ರಸಮಂಜರಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೆ ಪ್ರತಿನಿತ್ಯ ಮಹಾಲಕ್ಷ್ಮೀ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಏರ್ಪಡಿಸಿಲಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.15ರಂದು ಶ್ರೀಧರ್‌ಸಾಗರ್ ಸ್ಯಾಕ್ಶೋಫೋನ್, 16ರಂದು ರಂಗಸ್ವಾಮಿ ವೃಂದದಿಂದ ಸುಗಮ ಸಂಗೀತ, 17ರಂದು ಡಾ.ಎ.ಡಿ.ಶ್ರೀನಿವಾಸನ್ ವೃಂದದಿಂದ ಭಾವ ಸಂಗಮ, 18ರಂದು ವಾಣಿ ವೆಂಕಟರಾಮು ನೃತ್ಯರೂಪಕ, 19ರಂದು ಸಂಗೀತ ಶ್ರೀನಿವಾಸ್ ಅವರಿಂದ ಸಂಗೀತ ಸಂಜೆ, 20ರಂದು ತುಮಕೂರು ಮಂಜು ರಸಮಂಜರಿ, 21ರಂದು ಟಿ.ಎಸ್.ಸಾಗರ್‌ಪ್ರಸಾದ್ ವೃಂದದಿಂದ ನೃತ್ಯ ವೈವಿಧ್ಯ, 22ರಂದು ರೋಹಿಣಿ ಗುಂಡುರಾವ್ ವೃಂದದಿಂದ ಪಂಚವೀಣಾ ವಾದನ, 23ರಂದು ಬಾಲಾವಿಶ್ವನಾಥ್ ನೃತ್ಯರೂಪಕ, 24ರಂದು ಜಿ.ಶೀಲಾ ನಾಯ್ಡು ಅವರ ಕಥಾ ಕಾಲಕ್ಷೇಪ ನಡೆಯಲಿದೆ ಎಂದು ಅವರು ತಿಳಿಸಿದರು.ಗೋಷ್ಠಿಯಲ್ಲಿ ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಜಗದೀಶ್, ಟ್ರಸ್ಟ್ ಪದಾಧಿಕಾರಿಗಳಾದ ಬಿ.ಆರ್.ರಾಮಚಂದ್ರಶೆಟ್ಟಿ, ಟಿ.ಕೆ.ಪದ್ಮನಾಭ, ಎನ್.ಆರ್.ನಾಗರಾಜರಾವ್, ಶಾರದಾ, ಜ್ಯೋತಿ ಮಂಜುನಾಥ್ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry