ಭಾನುವಾರ, ನವೆಂಬರ್ 17, 2019
20 °C

15 ಅಭ್ಯರ್ಥಿ; 19 ನಾಮಪತ್ರ ಸಲ್ಲಿಕೆ

Published:
Updated:

ಕಾರವಾರ: ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 15 ಮಂದಿ ಅಭ್ಯರ್ಥಿಗಳು 19 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಹಳಿಯಾಳ-2, ಕಾರವಾರ-3 ಕುಮಟಾ-3 ಭಟ್ಕಳ-2, ಶಿರಸಿ-4 ಯಲ್ಲಾಪುರ-5 ನಾಮಪತ್ರ ಸಲ್ಲಿಕೆಯಾಗಿದೆ.ಬಿಎಸ್ಪಿಯಿಂದ ಮೂವರು, ಕಾಂಗ್ರೆಸ್‌ನಿಂದ ಒಬ್ಬರು, ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಹಿಂದೂಸ್ತಾನ್ ನಿರ್ಮಾಣ್ ದಳದಿಂದ ತಲಾ ಒಬ್ಬರು ಹಾಗೂ ಎಂಟು ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ವಿವರ ಇಂತಿದೆ. ಹಳಿಯಾಳ ವಿಧಾನಸಭಾ ಕ್ಷೇತ್ರ: ಎಲಿಯಾ ಕಾಟಿ (ಪಕ್ಷೇತರ), ಸಂಜೀವ ಕುಮಾರ್ (ಬಿಎಸ್‌ಆರ್ ಕಾಂಗ್ರೆಸ್). ಕಾರವಾರ ವಿಧಾನಸಭಾ ಕ್ಷೇತ್ರ: ಲಕ್ಷ್ಮೇಶ್ವರ ನಾಗೇಶ್ (ಬಿಎಸ್ಪಿ), ಉದಯ ಖಾಲವಾಡೇಕರ್ (ಪಕ್ಷೇತರ).ಕುಮಟಾ ವಿಧಾನಸಭಾ ಕ್ಷೇತ್ರ: ವಸಂತ ಜೋಗಲೇಕರ್ (ಬಿಎಸ್ಪಿ), ಕೆ.ಆರ್.ಭೂಷಣ್ (ಪಕ್ಷೇತರ), ನಾಗರಾಜ್ ಶ್ರೀಧರ ಶೇಟ್ (ಹಿಂದೂಸ್ತಾನ್ ನಿರ್ಮಾಣ್ ದಳ್).ಭಟ್ಕಳ ವಿಧಾನಸಭಾ ಕ್ಷೇತ್ರ: ಇನಾಯತುಲ್ಲಾ ಶಾಬಂದ್ರಿ (ಜೆಡಿಎಸ್), ಮುಲ್ಲಾ ನದೀಮ್ ಅಹ್ಮದ್ (ಪಕ್ಷೇತರ), ಶಿರಸಿ ವಿಧಾನಸಭಾ ಕ್ಷೇತ್ರ:ಸುಧಾಕರ ಕಿರಾ ಜೋಗಲೇಕರ್ (ಬಿಎಸ್ಪಿ), ಜುಕಾಕೊ ಇಸ್ಮಾಯಿಲ್ (ಪಕ್ಷೇತರ), ಶ್ರೀಧರ ಹೆಗಡೆ (ಪಕ್ಷೇತರ), ಅಣ್ಣಪ್ಪ ಶಿವರಾಮ ಮಡಿವಾಳ (ಪಕ್ಷೇತರ).ಯಲ್ಲಾಪುರ ವಿಧಾನಸಭಾ ಕ್ಷೇತ್ರ: ಶಿವರಾಮ ಹೆಬ್ಬಾರ್ (ಕಾಂಗ್ರೆಸ್), ಉಮಾಕಾಂತ ಕ್ಷತ್ರೀಯ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)