ಮಂಗಳವಾರ, ನವೆಂಬರ್ 19, 2019
23 °C

15 ನಾಮಪತ್ರ ತಿರಸ್ಕೃತ

Published:
Updated:

ಹಾಸನ: ವಿಧಾನಸಭಾ ಚುನಾವಣೆಗೆ ವಿವಿಧ ಕ್ಷೇತ್ರದಿಂದ ಆಯ್ಕೆ ಬಯಸಿ 117 ಉಮೇದುವಾರರು ಸಲ್ಲಿಸಿದ್ದ ಒಟ್ಟು 171 ನಾಮಪತ್ರಗಳಲ್ಲಿ 15 ನಾಮಪತ್ರಗಳು ತಿರಸ್ಕೃತಗೊಂಡಿವೆ.ಶ್ರವಣಬೆಳಗೊಳ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಸಲ್ಲಿಸಿದ್ದ 23 ನಾಮಪತ್ರಗಳೂ ಸಿಂಧುವಾಗಿವೆ.ಅರಸೀಕೆರೆ ಕ್ಷೇತ್ರದಲ್ಲಿ 18 ಆಕಾಂಕ್ಷಿಗಳು ಸಲ್ಲಿಸಿದ್ದ 22 ನಾಮಪತ್ರಗಳಲ್ಲಿ 1 ನಾಮಪತ್ರ ತಿರಸ್ಕೃತಗೊಂಡಿದೆ.ಬೇಲೂರು ಕ್ಷೇತ್ರದಲ್ಲಿ 15 ಉಮೇದುವಾರರು ಸಲ್ಲಿಸಿದ್ದ 21 ನಾಮಪತ್ರಗಳಲ್ಲಿ ಲಿಂಗೇಶ್ (ಜೆಡಿಎಸ್) ಹಾಗೂ ರಾಜೇಗೌಡ (ಸ್ವತಂತ್ರ) ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.ಹಾಸನ ಕ್ಷೇತ್ರದಲ್ಲಿ 15 ಉಮೇದುವಾರರು ಸಲ್ಲಿಸಿದ್ದ ಎಲ್ಲ 20 ನಾಮಪತ್ರಗಳೂ ಸಿಂಧುವಾಗಿವೆ.ಹೊಳೆನರಸೀಪುರ ಕ್ಷೇತ್ರದಲ್ಲಿ 16 ಉಮೇದುವಾರರು ಸಲ್ಲಿಸಿದ್ದ 26 ನಾಮಪತ್ರಗಳಲ್ಲಿ ಬಿ- ಫಾರ್ಮ್ ಇಲ್ಲದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಯೊಬ್ಬರ ನಾಮಪತ್ರ ತಿರಸ್ಕೃತಗೊಂಡು, 25 ನಾಮಪತ್ರಗಳು ಸಿಂಧುವಾಗಿವೆ.ಅರಕಲಗೂಡು ಕ್ಷೇತ್ರದಲ್ಲಿ 15 ಉಮೇದುವಾರರು ಸಲ್ಲಿಸಿದ್ದ ಎಲ್ಲ 26 ನಾಮಪತ್ರಗಳೂ ಸಿಂಧುವಾಗಿವೆ.ಸಕಲೇಶಪುರ ಕ್ಷೇತ್ರದಲ್ಲಿ ಗರಿಷ್ಠ 11 ನಾಮಪತ್ರಗಳು ತಿರಸ್ಕೃತವಾಗಿವೆ.ಇಲ್ಲಿ 20 ಉಮೇದುವಾರರು  ಒಟ್ಟು 33 ನಾಮಪತ್ರಗಳನ್ನು ಸಲ್ಲಿಸಿದ್ದರು. 22 ನಾಮಪತ್ರಗಳು ಮಾತ್ರ ಸಿಂಧುವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)