ಶನಿವಾರ, ಏಪ್ರಿಲ್ 17, 2021
23 °C

15 ಸಾವಿರ ರೂಪಾಯಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ತಮ್ಮ ಅಭಿಯಾನಕ್ಕೆ ಬಾಗಪತ್ ರುಸ್ತಂಪುರ್ ಗ್ರಾಮದ ಹಿರಿಯರೊಬ್ಬರು 15 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಭಾರತದ (ಐಎಸಿ) ಮುಖಂಡ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.ಭ್ರಷ್ಟ ರಾಜಕಾರಣಿಗಳು ಮತ್ತು ಉದ್ದಿಮೆದಾರರ ವಿರುದ್ಧ ಸಮರ ಸಾರಿರುವ ಕೇಜ್ರಿವಾಲ್ ತಮ್ಮ ಅಭಿಯಾನಕ್ಕೆ ಕಾರ್ಪೋರೇಟ್ ಕುಳಗಳಿಂದ ನೆರವು ಪಡೆಯುತ್ತಿದ್ದಾರೆ ಎಂದು ಪ್ರಮುಖ ದೈನಿಕವೊಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಅವರು ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ. `ನಮ್ಮ ಅಭಿಯಾನಕ್ಕೆ ಬಡ ವ್ಯಕ್ತಿಯೊಬ್ಬರು ಸಣ್ಣ ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ. ಇದು ನನ್ನ ಹೃದಯ ತಟ್ಟಿದೆ. ಹಣಕ್ಕಿಂತಲೂ ಅವರ ಆಶೀರ್ವಾದ ಮುಖ್ಯ. ಅದಕ್ಕೆ ಬೆಲೆ ಕಟ್ಟಲಾಗದು. ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ ಮತ್ತು ಆಶೀರ್ವಾದದಿಂದ ನಿಜಕ್ಕೂ ದೇಶ ಬದಲಾಗಲಿದೆ~ ಎಂದಿದ್ದಾರೆ.`ಕೆಲವರು ನಮ್ಮ ಅಭಿಯಾನ ನಗರಕ್ಕೆ ಮಾತ್ರ ಸೀಮಿತ ಎಂದಿದ್ದರು. ಆದರೆ, ರುಸ್ತಂಪುರ್ ಗ್ರಾಮದ ವೀರ್ ಸಿಂಗ್ ದೇಣಿಗೆ ನೀಡಿ, ಅವರ ವಾದವನ್ನು ಸುಳ್ಳು ಮಾಡಿದ್ದಾರೆ~ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.