1,540ಕೋಟಿ ದಾನ ಪ್ರಕಟಿಸಿದ ಜಿಎಂ. ರಾವ್
ಬೆಂಗಳೂರು: ಸಮಾಜದ ಅವಕಾಶ ವಂಚಿತರ ಅಗತ್ಯಗಳನ್ನು ಪೂರೈಸುವ ಉದ್ದೇಶದ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ` 1,540 ಕೋಟಿಗಳನ್ನು ದಾನ ನೀಡುವುದಾಗಿ ಜಿಎಂಆರ್ ಸಮೂಹದ ಅಧ್ಯಕ್ಷ ಜಿ. ಎಂ. ರಾವ್ ಅವರು ಪ್ರಕಟಿಸಿದ್ದಾರೆ.
‘ಜಿಎಂಆರ್ ವರಲಕ್ಷ್ಮಿ ಫೌಂಡೇಷನ್’ ದಾನ ಧರ್ಮದ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಈ ಮೊತ್ತ ಸದ್ಬಳಕೆ ಆಗಲಿದೆ.‘ನಮ್ಮ ಯಶಸ್ಸಿನಲ್ಲಿನ ಕೆಲ ಭಾಗವನ್ನು ಸಮಾಜಕ್ಕೆ ಮರಳಿ ನೀಡಬೇಕು ಎನ್ನುವ ತತ್ವ ಪಾಲಿಸಬೇಕೆಂದು ನಾನು ನನ್ನ ಉದ್ದಿಮೆ ವಹಿವಾಟಿನ ಆರಂಭದ ದಿನದಿಂದಲೂ ನಂಬಿಕೊಂಡು ಬಂದಿರುವೆ’ ಎಂದು ರಾವ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.