ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ಡಿಸಿ ಕಚೇರಿ ಎದುರು ಧರಣಿ: ಮುತಾಲಿಕ

Last Updated 13 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಚೆನ್ನಮ್ಮನ ಕಿತ್ತೂರು: `ಅತಿಕ್ರಮಣ, ಅಕ್ರಮ ಕಟ್ಟಡಗಳ ತೆರವು ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇದೇ 15ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ದೇಶಭಕ್ತ ನಾಗರಿಕರು, ಮಹಿಳಾ, ಕನ್ನಡ ಸಂಘಟನೆಗಳು ಹಾಗೂ ಪ್ರಮುಖ ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ~ ಎಂದು  ಕಿತ್ತೂರು ಸಂಸ್ಥಾನ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಪ್ರಮೋದ ಮುತಾಲಿಕ ಪ್ರಕಟಿಸಿದರು.

ಖಾನಾಪುರ ತಾಲ್ಲೂಕಿನ ತೊಲಗಿ ಗ್ರಾಮಕ್ಕೆ ಆಗಮಿಸಿದ ವೀರಜ್ಯೋತಿ ಯನ್ನು ಬರಮಾಡಿಕೊಂಡ ನಂತರ ಅವರು ಮಾತನಾಡಿದರು.

`ಕಳೆದ 10ರಿಂದ ಬೈಲಹೊಂಗಲದಿಂದ ನಾಡಿನಾದ್ಯಂತ ಸಂಚಾರ ಆರಂಭಿಸಿದ ಕಿತ್ತೂರು ಉತ್ಸವದ ವೀರಜ್ಯೋತಿ ಯಾತ್ರೆಯ ಚಾಲನಾ ಸಮಾರಂಭಕ್ಕೆ ಕಿತ್ತೂರು ರಾಜವಂಶಸ್ಥರಾದ ದೇಸಾಯಿ ಕುಟುಂಬದವರನ್ನು ಆಮಂತ್ರಿಸದೇ ಕಡೆಗಣಿಸಲಾಯಿತು. ಬರೀ ಬಾಯಿ ಮಾತಿನಲ್ಲಿ ಇವರಿಗೆ ಗೌರವ ತೋರಿಸುತ್ತಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಲುವು ಖಂಡನೀಯ~ ಎಂದರು.

`ಜ್ಯೋತಿ ರಥಯಾತ್ರೆಯ ಸಿಂಗಾರ ಅಷ್ಟೊಂದು ಶೋಭಾಯಮಾನ ವಾಗಿಲ್ಲ. ವಾಹನಕ್ಕೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಮಳೆ ಬಂದರೆ ಹೊತ್ತಿರುವ ಜ್ಯೋತಿಯನ್ನು ಆರಿಸಿ ಅದಕ್ಕೆ ಪ್ಲ್ಯಾಸ್ಟಿಕ್ ಚೀಲ ಹೊದಿಸಲಾಗುತ್ತಿದೆ~ ಎಂದು ದೂರಿದರು.

ಯಾವುದೇ ರಾಜಕಾರಣಿಗಳು ಅಥವಾ ಅಧಿಕಾರಿಗಳು ಕರೆಯದಿದ್ದರೂ ತೋಲಗಿ ಗ್ರಾಮಕ್ಕೆ ಜ್ಯೋತಿಯಾತ್ರೆ ಆಗಮಿಸಿದಾಗ 11ಜನ ರಾಜವಂಶಸ್ಥ ಕುಟುಂಬದವರು ಅದಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದ ಕ್ರಮವನ್ನು ಮುತಾಲಿಕ ಅವರು ಕೊಂಡಾಡಿದರು.

ಸ್ವಾಗತಾರ್ಹ: `ಅ. 23ರ ರಾಣಿ ಚೆನ್ನಮ್ಮಾಜಿ ವಿಜಯೋತ್ಸವ ದಿನವನ್ನು ರಾಜ್ಯದಾದ್ಯಂತ ಆಚರಿಸಬೇಕು ಹಾಗೂ ಅಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ತಾವು ಸ್ವಾಗತಿಸುವುದಾಗಿ~ ಮುತಾಲಿಕ ತಿಳಿಸಿದರು.

`ರಾಜಕಾರಣಿಗಳ ವೈಭವ ಮತ್ತು ಅವರ ಪಕ್ಷದ ಪ್ರಚಾರಕ್ಕಾಗಿ ಉತ್ಸವ ನಡೆಸುತ್ತಿರುವುದನ್ನು ಸಮಿತಿ ಖಂಡಿಸುತ್ತದೆ~ ಎಂದೂ ಅವರು ಹೇಳಿದರು. ರಾಜ ವಂಶಸ್ಥ ಮಲ್ಲಸರ್ಜ ದೇಸಾಯಿ, ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವನಸಿಂಗ್ ಮೊಕಾಶಿ,  ಕಾರ್ಯಾಧ್ಯಕ್ಷ ಹಾಗೂ ವಂಶಜ ಉದಯಕುಮಾರ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT