16ರಂದು ದೀರ್ಘ ಅವಧಿಯ ಸೈಕಲ್ ರ್‍ಯಾಲಿ

7

16ರಂದು ದೀರ್ಘ ಅವಧಿಯ ಸೈಕಲ್ ರ್‍ಯಾಲಿ

Published:
Updated:

ಬೆಂಗಳೂರು: `ಭಾರತದ ಅತ್ಯಂತ ದೀರ್ಘ ಸೈಕಲ್ ರ‌್ಯಾಲಿಯ ಮೊಂತ್ರ ಟೂರ್ ಆಫ್  ಲ್‌ಗಿರೀಸ್(ಟಿಎಫ್‌ಎನ್)ನ ಐದನೇ ಆವೃತ್ತಿಯ ಜಾಥಾ (ಡಿ.16) ಭಾನುವಾರ ನಗರ ಗರುಡಾಮಾಲ್ ಸಮೀಪದ ಸಲಿವಾನ್ ಪೊಲೀಸ್ ಹಾಕಿ ಮೈದಾನದಲ್ಲಿ ಚಾಲನೆ ನೀಡಲಾಗುವುದು' ಎಂದು ನೀಲಗಿರೀಸ್ ಸಂಸ್ಥೆಯ ಸಂಸ್ಥಾಪಕ ಶ್ರೀಧರ ಪಬ್ಬಿಶೆಟ್ಟಿ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಎಂಟು ದಿನಗಳ ನಡೆಯುವ ಜಾಥಾದಲ್ಲಿ 8 ಮಹಿಳಾ ಸವಾರರು ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ 85 ಸೈಕಲ್ ಸವಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು' ಎಂದರು. `ಜಾಥಾ 860 ಕಿಲೋ ಮೀಟರ್ ದೂರ ಚಲಿಸಲಿದ್ದು, ನಗರದಿಂದ ಮೈಸೂರು, ಮಡಿಕೇರಿ, ಊಟಿಯ ಮೂಲಕ ಮೆಟ್ಟುಪಾಳ್ಯಂವರೆಗೆ ನಡೆಯಲಿದೆ. ಇಂಗಾಲದ ಬಳಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಲು ಜಾಥಾವನ್ನು ಆಯೋಜಿಸಲಾಗಿದೆ' ಎಂದು ಹೇಳಿದರು.`ಪ್ರತಿ ದಿನ 100 ರಿಂದ 180 ಕಿಲೋ ಮೀಟರ್ ವರೆಗೆ ಜಾಥಾ ನಡೆಯಲಿದ್ದು, ಸವಾರರು ತಮಗೆ ಇಷ್ಟವಾದ ವೇಗದಲ್ಲಿ ಸವಾರಿ ನಡೆಸಬಹುದು. ಪುರುಷರಿಗೆ ಮೆನ್ ಮಾಸ್ಟರ್‌ನಲ್ಲಿ ಮೂರು , ಮೆನ್ ಓಪನ್‌ನಲ್ಲಿ ಮೂರು, ಮಹಿಳೆಯರಿಗೆ ಮಹಿಳಾ ಓಪನ್‌ನಲ್ಲಿ 3ಬಹುಮಾನ ಸೇರಿದಂತೆ 4 ಮತ್ತು ಐದನೇ ಸ್ಥಾನಕ್ಕೆ ಬಹುಮಾನಗನ್ನು ನೀಡಲಾಗುವುದು' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry