16ರಿಂದ ಜನಪದ ಗಾಯಕರ ಸಮಾವೇಶ

ಬುಧವಾರ, ಮೇ 22, 2019
32 °C

16ರಿಂದ ಜನಪದ ಗಾಯಕರ ಸಮಾವೇಶ

Published:
Updated:

ಬೆಂಗಳೂರು: ಮೂಲ ಮತ್ತು ಆಧುನಿಕ ಜನಪದ ಗಾಯಕರ ರಾಜ್ಯಮಟ್ಟದ ಪ್ರಥಮ ಸಮಾವೇಶ ಇದೇ 16 ಮತ್ತು 17ರಂದು ನಡೆಯಲಿದೆ. ಇಲ್ಲಿನ `ರವೀಂದ್ರ ಕಲಾಕ್ಷೇತ್ರ~ದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ 28 ಜಿಲ್ಲೆಗಳ ಒಟ್ಟು 67 ಮಂದಿ ಗಾಯಕರು ಒಂದೇ ವೇದಿಕೆಯಲ್ಲಿ ಜನಪದ ಗಾಯನ ಪ್ರಸ್ತುತಪಡಿಸಲಿದ್ದಾರೆ.ಇಲ್ಲಿನ `ಕನ್ನಡ ಭವನ~ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ, `ಮೂಲ ಜನಪದ ಗಾಯಕರು ಮತ್ತು ಆಧುನಿಕ ಜನಪದ ಗಾಯಕರನ್ನು ಮುಖಾಮುಖಿಯಾಗಿಸುವುದು, ಯುವಕರನ್ನು ಜನಪದ ಗಾಯನದತ್ತ ಆಸಕ್ತರಾಗುವಂತೆ ಮಾಡುವುದು ಈ ಸಮಾವೇಶದ ಉದ್ದೇಶ~ ಎಂದರು.ಮೂಲ ಜನಪದ ಗಾಯಕರಿಗೆ ಗ್ರಾಮೀಣ ಸಂಸ್ಕೃತಿಯ ಪರಿಚಯ ಇರುತ್ತದೆ. ಆಧುನಿಕ ಗಾಯಕರಿಗೆ ತಾಂತ್ರಿಕ ಪರಿಕರಗಳ ಪರಿಚಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೂಲ ಮತ್ತು ಆಧುನಿಕ ಜನಪದ ಗಾಯಕರನ್ನು ಒಂದೇ ವೇದಿಕೆಯಲ್ಲಿ ತಂದು ಸಂವಾದಕ್ಕೆ ಅವಕಾಶ ನೀಡಲಾಗುವುದು.ಆಧುನಿಕ ಪರಿಕರಗಳನ್ನು ಉಪಯೋಗಿಸಿ ಜನಪದ ಗೀತೆಗಳನ್ನು ಮೂಲ ಧಾಟಿಯಲ್ಲೇ ಆಕರ್ಷಕವಾಗಿ ಹಾಡುವಂತೆ ಮಾಡಬೇಕು ಎಂದು ಅವರು ಹೇಳಿದರು.ಗಾಯನದ ಸ್ವರೂಪದಲ್ಲಿ ತುಸು ಬದಲಾವಣೆ ತಂದರೆ ಜನಪದ ಗೀತೆಗಳನ್ನು ಯುವಕರಿಗೆ ಇಷ್ಟವಾಗುವಂತೆ ಮಾಡಬಹುದು. ಆಗ ಜನಪದ ಗೀತಗಾಯನ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರೆಯುತ್ತದೆ.

ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಈ ಸಮಾವೇಶಕ್ಕೆ ಸಹಕಾರ ನೀಡಿದೆ ಎಂದರು.

 

ಜಾನಪದ ನಿಘಂಟು ಮುದ್ರಣಕ್ಕೆ ಸಿದ್ಧ

ಪ್ರಜಾವಾಣಿ ವಾರ್ತೆ

ಬೆಂಗಳೂರು:
ಕರ್ನಾಟಕ ಜಾನಪದ ಅಕಾಡೆಮಿಯ ಮಹತ್ವಾಕಾಂಕ್ಷೆಯ ಜಾನಪದ ನಿಘಂಟಿನ ಮೊದಲ ಸಂಪುಟ ಮುದ್ರಣಕ್ಕೆ ಸಿದ್ಧವಾಗಿದೆ. `ಅ~ದಿಂದ `ಅಃ~ವರೆಗಿನ ಜಾನಪದ ಪದಗಳ ಅರ್ಥ ಇದರಲ್ಲಿ ಲಭ್ಯವಿದೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು, `ಸ್ವರಾಕ್ಷರಗಳಿಂದ ಆರಂಭವಾಗುವ ಜಾನಪದ ಪದಗಳ ನಿಘಂಟು ಸಿದ್ಧವಾಗಿದೆ~ ಎಂದು ತಿಳಿಸಿದರು.ಈ ಸಂಪುಟದ ಮುದ್ರಣಕ್ಕೆ ಟೆಂಡರ್ ಕರೆಯಲಾಗಿದ್ದು, ಇದೇ 26ರಂದು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅನಂತರ ಸಂಪುಟದ ಮುದ್ರಣ ಕಾರ್ಯ ಆರಂಭಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ನಿಘಂಟಿನ ಮೊದಲ ಸಂಪುಟ ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry