16ರಿಂದ ಶಾಲಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

7

16ರಿಂದ ಶಾಲಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

Published:
Updated:

ಬೆಂಗಳೂರು: ಪರಿಕ್ರಮ ಚಾಂಪಿಯನ್‌ ಲೀಗ್‌ ಶಾಲಾ ಫುಟ್‌ಬಾಲ್‌ ಟೂರ್ನಿಯ ಮೂರನೇ ಆವೃತ್ತಿ ಸೆಪ್ಟೆಂಬರ್‌ 16ರಿಂದ 20ರ ವರೆಗೆ ರಾಜ್ಯ ಫುಟ್‌ಬಾಲ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, 16 ತಂಡಗಳು ಪೈಪೋಟಿ ನಡೆಸಲಿವೆ.16 ವರ್ಷದೊಳಗಿನವರ ಈ ಟೂರ್ನಿಯಲ್ಲಿ ಬೆಂಗಳೂರಿನ 13 ತಂಡಗಳು ಮತ್ತು ಮುಂಬೈ, ಕೇರಳ ಮತ್ತು ಗೋವಾದ ತಲಾ ಒಂದು ತಂಡಗಳು ಪಾಲ್ಗೊಳ್ಳಲಿವೆ.‘ತಳ ಮಟ್ಟದಿಂದ ಫುಟ್‌ಬಾಲ್ ಬೆಳವಣಿಗೆ ಆಗಬೇಕು ಎನ್ನುವ ಕಾರ­ಣಕ್ಕಾಗಿ ಪ್ರತಿ ವರ್ಷವೂ ಈ ಚಾಂಪಿ­ಯನ್‌ ಲೀಗ್‌ ಆಯೋಜನೆ ಮಾಡ­ಲಾ­ಗುತ್ತಿದೆ. ಫಿಫಾ ನಿಯಮಗಳ ಪ್ರಕಾರ ಟೂರ್ನಿ ನಡೆಯುತ್ತದೆ’ ಎಂದು ಪರಿಕ್ರಮ ಹ್ಯೂಮ್ಯಾನಿಟಿ ಫೌಂಡೇ­ಷನ್‌ನ ಸಿಇಒ ಶುಕ್ಲಾ ಬೋಸ್‌ ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು. 16 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಟೂರ್ನಿ ನಾಕೌಟ್‌ ಮಾದರಿಯಲ್ಲಿ ನಡೆಯಲಿದೆ.ರಾಜ್ಯ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಎ.ಆರ್. ಖಲೀಲ್‌,  ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಚೇರಮನ್‌ ಎಂ.ಪಿ. ಸ್ವಾಮಿ ಹಾಗೂ ಕಾರ್ಯದರ್ಶಿ ಟಿ.ಎಸ್‌. ಭೂಪಾಲ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಮಾಜಿ ಅಥ್ಲೀಟ್‌ ಅಶ್ವಿನಿ ನಾಚಪ್ಪ ಟ್ರೋಫಿ ಅನಾವರಣ ಮಾಡಿದರು.ಪಾಲ್ಗೊಳ್ಳಲಿರುವ ತಂಡಗಳು: ಡಿಪಿಎಸ್‌ ನಾರ್ಥ್‌, ವಿದ್ಯಾ ನಿಕೇತನ, ಟಿಆರ್‌ಐಒ ವರ್ಲ್ಡ್‌್ ಶಾಲೆ, ಕರ್ನಾಟಕ ವಿದ್ಯಾಶಾಲಾ, ಕೇಂದ್ರೀಯ ವಿದ್ಯಾಲಯ  ಹೆಬ್ಬಾಳ, ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲು, ಪರಿಕ್ರಮ ಸೆಂಟರ್‌ ಆಫ್‌ ಲರ್ನಿಂಗ್, ಲೆಜಿನ್ಸಿ ಶಾಲೆ ಬೆಂಗಳೂರು, ರಾ್ಯಾನ್‌ ಇಂಟರ್‌ ನ್ಯಾಷನಲ್‌ ಶಾಲೆ, ಇನ್ವೆಂಚರ್‌ ಅಕಾಡೆಮಿ, ಗ್ರೀನ್‌ವುಡ್‌ ಶಾಲೆ, ಪ್ರೆಸಿಡೆನ್ಸಿ ಶಾಲೆ, ದ ಇಂಟರ್‌ ನ್ಯಾಷನಲ್‌ ಶಾಲೆ ಬೆಂಗಳೂರು, ಕಣ್ಣೂರು (ಕೇರಳ), ಮುಂಬೈ ಮತ್ತು ಗೋವಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry