ಶನಿವಾರ, ನವೆಂಬರ್ 23, 2019
17 °C

16 ನಾಮಪತ್ರ ಸಲ್ಲಿಕೆ

Published:
Updated:

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಒಟ್ಟು 14 ಅಭ್ಯರ್ಥಿಗಳು 16 ನಾಮಪತ್ರ ಸಲ್ಲಿಸಿದ್ದಾರೆ. ಮಾಗಡಿ ಕ್ಷೇತ್ರದಿಂದ ಇಬ್ಬರು, ರಾಮನಗರ ಕ್ಷೇತ್ರದಿಂದ ನಾಲ್ವರು, ಕನಕಪುರದಿಂದ ಇಬ್ಬರು (ಮೂರು ನಾಮಪತ್ರ) ಹಾಗೂ ಚನ್ನಪಟ್ಟಣದಿಂದ ಆರು ಅಭ್ಯರ್ಥಿಗಳು (7 ) ನಾಮಪತ್ರ ಸಲ್ಲಿಸಿದ್ದಾರೆ.ಮಾಗಡಿ ಕ್ಷೇತ್ರದಿಂದ ರಮೇಶ.ಕೆ (ಜೆಡಿಯು), ಆರ್.ಎನ್.ಗುರುಪ್ರಸಾದ (ಪಕ್ಷೇತರ) ತಲಾ ಒಂದು ನಾಮಪತ್ರಗಳನ್ನು, ರಾಮನಗರ ಕ್ಷೇತ್ರದಿಂದ ಎಸ್.ಆರ್.ನಾಗರಾಜು (ಕೆಜೆಪಿ), ಫೈರೋಜ್ ಆಲಿ ಖಾನ್ (ಎಸ್‌ಡಿಪಿಐ), ಜಿ.ಗೋವಿಂದಯ್ಯ (ಆರ್‌ಪಿಐ), ಕಾಂತರಾಜು (ಪಕ್ಷೇತರ) ತಲಾ ಒಂದು ನಾಮಪತ್ರಗಳನ್ನು, ಚನ್ನಪಟ್ಟಣ ಕ್ಷೇತ್ರದಿಂದ ವಿ.ಎಸ್.ಸುಜೀವನ್ ಕುಮಾರ್ (ಬಿಎಸ್‌ಪಿ), ಎಸ್.ಆರ್.ಜೈಕಿಸಾನ್ (ಪಕ್ಷೇತರ), ಜೆ.ಟಿ.ಪ್ರಕಾಶ್ (ಪಕ್ಷೇತರ), ಎಂ.ಯೋಗೇಶ (ಪಕ್ಷೇತರ), ಸೈಯದ್ ಜುಲ್ಫಿಕರ್ ಮೆಹದಿ (ಪಕ್ಷೇತರ) ತಲಾ ಒಂದು ನಾಮಪತ್ರಗಳನ್ನು ಹಾಗೂ ಸಾದತ್ ಆಲಿ ಖಾನ್ (ಕಾಂಗ್ರೆಸ್) 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಕನಕಪುರ ಕ್ಷೇತ್ರದಿಂದ ಮಲ್ಲಿಕಾರ್ಜುನಯ್ಯ (ಬಿಎಸ್‌ಪಿ) 2 ನಾಮಪತ್ರ, ಡಿ.ಕೆ.ಶಿವಕುಮಾರ್ (ಕಾಂಗ್ರೆಸ್) 1 (ಸೋಮವಾರ 3 ನಾಮಪತ್ರ ಸಲ್ಲಿಸಿದ್ದಾರೆ) ನಾಮಪತ್ರವನ್ನು ಸಲ್ಲಿಸಿರುವರು.ಜಿಲ್ಲೆಯಲ್ಲಿ ಇದುವರೆಗೂ ಒಟ್ಟಾರೆ 36 ಅಭ್ಯರ್ಥಿಗಳು 58 ನಾಮಪತ್ರ ಸಲ್ಲಿಸಿದಂತಾಗಿದೆ.  ಚನ್ನಪಟ್ಟಣದಲ್ಲಿ 12 ಅಭ್ಯರ್ಥಿಗಳು 16 ನಾಮಪತ್ರ , ರಾಮನಗರದಲ್ಲಿ 6 ಅಭ್ಯರ್ಥಿಗಳು 11 ನಾಮಪತ್ರ , ಕನಕಪುರದಲ್ಲಿ 11 ಅಭ್ಯರ್ಥಿಗಳು 19 ನಾಮಪತ್ರ ಹಾಗೂ ಮಾಗಡಿಯಲ್ಲಿ 7 ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)