16 ಭಾರತೀಯರ ಬಂಧನ

7

16 ಭಾರತೀಯರ ಬಂಧನ

Published:
Updated:

ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿ ನೆಲೆಸುವ ಸಲುವಾಗಿ ನಕಲಿ ದಾಖಲೆಗಳನ್ನು ನೀಡಿ ವಿವಾಹ ನೋಂದಣಿ ಮಾಡಿಸಿದ್ದ ಆಪಾದನೆಯ ಮೇಲೆ ಪಂಜಾಬ್ ಮೂಲದ ಭಾಂಗ್ರಾ ಗಾಯಕ ಸೇರಿದಂತೆ 16 ಭಾರತೀಯರನ್ನು ಇಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.ಬಂಧಿತರಾದ ಭಾಂಗ್ರಾ ಶೈಲಿಯ ಉದಯೋನ್ಮುಖ ಯುವ ಗಾಯಕ ಗ್ಯಾರಿ ಸಂಧು ಅವರಿಗೆ ಬ್ರಿಟನ್‌ನಲ್ಲಿ ನೆಲೆಸಲು ಅನುಮತಿ ಇಲ್ಲದ ಕಾರಣ ವಾಪಸು ಭಾರತಕ್ಕೆ ಕಳುಹಿಸಲಾಗಿದೆ. ಇತ್ತೀಚಿಗೆ ವಲಸೆ ಅಧಿಕಾರಿಗಳು ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಹಚ್ಚಲು ನಡೆಸಿದ ಕಾರ್ಯಾಚರಣೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry