16 ವರ್ಷ ಮೀರದವರ ಲೈಂಗಿಕ ಕ್ರಿಯೆ ಅಪರಾಧ

7

16 ವರ್ಷ ಮೀರದವರ ಲೈಂಗಿಕ ಕ್ರಿಯೆ ಅಪರಾಧ

Published:
Updated:

ನವದೆಹಲಿ, (ಐಎಎನ್‌ಎಸ್): ಹದಿನಾರರಿಂದ 18ರ ಹರೆಯದ ನಡುವಿನವರಲ್ಲಿ ನಡೆಯುವ ಪರಸ್ಪರ ಸಮ್ಮತದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎನ್ನುವ ಕರಡು ಮಸೂದೆ ಸದ್ಯದಲ್ಲೇ ಸಂಸತ್ತಿನಲ್ಲಿ ಮಂಡನೆಯಾಗಲಿದೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೃಷ್ಣಾ ತಿರತ್ ಮಂಗಳವಾರ ತಿಳಿಸಿದರು.‘16ರಿಂದ 18ರ ಹರೆಯದವರ ನಡುವೆ ಪರಸ್ಪರ ಒಮ್ಮತದ ಲೈಂಗಿಕ ಕ್ರಿಯೆ ನಡೆದಲ್ಲಿ ಅದು ಅಪರಾಧವಲ್ಲ ಎಂದು ನಮ್ಮ ಕರಡು ಮಸೂದೆ ತಿಳಿಸುತ್ತದೆ ಎಂದು ಮತ್ತೊಮ್ಮೆ ನಾನು ಸ್ಪಷ್ಟಪಡಿಸುತ್ತೇನೆ. ಆದರೆ ಇದು 16ಕ್ಕಿಂತ ಕೆಳ ವಯಸ್ಸಿನವರ ನಡುವೆ ನಡೆದಲ್ಲಿ ಅದು ಅಪರಾಧ’ ಎಂದು ತಿಳಿಸಿದರು.‘ಒಂದು ವೇಳೆ ಪರಸ್ಪರ ಸಮ್ಮತ ಇಲ್ಲದೇ ಲೈಂಗಿಕ ಕ್ರಿಯೆ ನಡೆದಲ್ಲಿ ಅದು ಖಂಡಿತವಾಗಿಯೂ ಅತ್ಯಾಚಾರ’ ಎಂದು ಅವರು ಹೇಳಿದರು.ಮಾಧ್ಯಮಗಳ ವರದಿಯ ಕುರಿತು ಸ್ಪಷ್ಟನೆ ನೀಡಿದ ತಿರತ್, ಪರಸ್ಪರ ಸಮ್ಮತದ ಲೈಂಗಿಕ ಕ್ರಿಯೆ ಪ್ರಾಯವನ್ನು 12 ಕ್ಕೆ ಇಳಿಸಬೇಕು ಎಂಬ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ  ಶಿಫಾರಸು ಮಾಡಿದ್ದರೂ ನಮ್ಮ ಸಚಿವಾಲಯ ಅದನ್ನು ಕರಡು ಮಸೂದೆಯಲ್ಲಿ ಸೇರಿಸಿಲ್ಲ ಎಂದು ಅವರು ಹೇಳಿದರು.ಮಸೂದೆ ಸಿದ್ಧವಾಗಿದ್ದು ಸಂಸತ್ತಿನಲ್ಲಿ ಕೂಡಲೇ ಮಂಡಿಸುವ ನಿರೀಕ್ಷೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನೂ ಕೇಳಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry