ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಸಾವಿರ ಗಡಿ ಇಳಿದ ಸೂಚ್ಯಂಕ!

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರೂಪಾಯಿ ಅಪಮೌಲ್ಯ ಮತ್ತು ಗ್ರೀಸ್ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರ 78 ಅಂಶಗಳಷ್ಟು ಕುಸಿದಿದ್ದು, 4 ತಿಂಗಳ ನಂತರ ಇದೇ ಮೊದಲ ಬಾರಿಗೆ  16 ಸಾವಿರದ ಗಡಿಯಿಂದ ಕೆಳಕ್ಕಿಳಿದಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರ ರೂ.56.19ಕ್ಕೆ ಇಳಿದಿದೆ. ಈ ಬೆಳವಣಿಗೆಗಳಿಂದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗೆ ತೀವ್ರಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ  ಬಂಡವಾಳವನ್ನು ಪಾಪಸ್ ಪಡೆಯುತ್ತಿದ್ದಾರೆ. ಮಂಗಳವಾರ `ಎಫ್‌ಐಐ~ಗಳು ರೂ.283 ಕೋಟಿ ಬಂಡವಾಳ ಹಿಂತೆಗೆದುಕೊಂಡಿವೆ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಹೇಳಿದೆ.

ದಿನದ ವಹಿವಾಟಿನ ಅಂತ್ಯಕ್ಕೆ ಸೂಚ್ಯಂಕ 15,948 ಅಂಶಗಳಿಗೆ ಕುಸಿಯಿತು. ರಾಷ್ಟೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ  24 ಅಂಶಗಳನ್ನು ಕಳೆದುಕೊಂಡು 4,835 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಗರಿಷ್ಠ ನಷ್ಟ ಅನುಭವಿಸಿದ್ದು ಭಾರ್ತಿ ಏರ್‌ಟೆಲ್ ಷೇರುಗಳು. ಇವು ಶೇ 4.04ರಷ್ಟು ಮೌಲ್ಯ ಕಳೆದುಕೊಂಡಿವೆ.
ಕಳೆದೊಂದು ವರ್ಷದಲ್ಲಿ `ಬಿಎಸ್‌ಇ~ ಒಟ್ಟಾರೆ ಶೇ 14ರಷ್ಟು ಕುಸಿತ ಕಂಡಿದೆ. ರೂಪಾಯಿ ಮೌಲ್ಯ ಶೇ 20ರಷ್ಟು ಕುಸಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT