ಶುಕ್ರವಾರ, ನವೆಂಬರ್ 22, 2019
20 °C

160 ಮಂದಿ, 203 ನಾಮಪತ್ರ ಸಲ್ಲಿಕೆ

Published:
Updated:

ಕೋಲಾರ: ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟವಾದ ಏ.10ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಏ.17ರವರೆಗೆ ಒಟ್ಟು 160 ಮಂದಿ 203 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಶ್ರೀನಿವಾಸಪುರದಲ್ಲಿ 13 ಮಂದಿ 19 ನಾಮಪತ್ರ ಸಲ್ಲಿಸಿದ್ದಾರೆ.ಮುಳಬಾಗಲಿನಲ್ಲಿ 41 ಮತ್ತು 47 ನಾಮಪತ್ರ, ಕೆಜಿಎಫ್‌ನಲ್ಲಿ 42 ಮಂದಿ 52 ನಾಮಪತ್ರ, ಬಂಗಾರಪೇಟೆಯಲ್ಲಿ 16 ಮಂದಿ 22 ನಾಮಪತ್ರ, ಕೋಲಾರದಲ್ಲಿ 21 ಮಂದಿ 29 ನಾಮಪತ್ರ, ಮಾಲೂರಿನಲ್ಲಿ 27 ಮಂದಿ 34 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ನಾಮಪತ್ರಗಳ ಪಕ್ಷಾವಾರು ವಿವರ ಹೀಗಿದೆ

ಬಿಜೆಪಿ-9, ಕಾಂಗ್ರೆಸ್-11, ಜೆಡಿಎಸ್ 7, ಕೆಜೆಪಿ-10,ಆರ್‌ಪಿಐ -2,  ಆರ್‌ಪಿಐಎ-3, ಬಿಎಸ್‌ಪಿ -7, ಸಿಪಿಐ-2, ಸಿಪಿಐಎಂ-1, ಸಮಾಜವಾದಿ ಜನತಾ ಪಾರ್ಟಿ-6, ಲೋಕಜನಶಕ್ತಿ-2, ಸವೋದಯ ಕರ್ನಾಟಕ ಪಕ್ಷ-1, ಬಿಎಸ್‌ಆರ್ ಕಾಂಗ್ರೆಸ್-5, ಸಮಾಜವಾದಿ ಪಕ್ಷ-3, ಜೆಡಿಯು-5, ಹಿಂದೂಸ್ತಾನ್ ಜನತಾ ಪಕ್ಷ-1, ನ್ಯಾಷನಲ್‌ಪೀಪಲ್ಸ್ ಪಾರ್ಟಿ-1, ಲೋಕಸತ್ತಾ-1, ಎಎನ್‌ಸಿ-1, ಕೆಎಸ್‌ಆರ್‌ಎಸ್-1, ಎಐಎಡಿಎಂಕೆ-1 ಮತ್ತು 80 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)