ಶುಕ್ರವಾರ, ನವೆಂಬರ್ 15, 2019
26 °C

167 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

Published:
Updated:

ವಿಜಾಪುರ: ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದ್ದು, 167 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾಗಿವೆ.ವಿಜಾಪುರ ನಗರ ಕ್ಷೇತ್ರದಲ್ಲಿ ಮೂವರು ಹಾಗೂ ನಾಗಠಾಣ ಮೀಸಲು ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇವರೆಲ್ಲರೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.ಕೆಲ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದರಿಂದ ಒಟ್ಟಾರೆ 243 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳ ಪೈಕಿ 237 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅವರು ಹೇಳಿದ್ದಾರೆ.ನಾಮಪತ್ರ ಕ್ರಮಬದ್ಧವಾಗಿರುವ ಅಭ್ಯರ್ಥಿಗಳ ಸಂಖ್ಯೆ: ವಿಜಾಪುರ ನಗರ ಕ್ಷೇತ್ರ-23, ಮುದ್ದೇಬಿಹಾಳ-16, ಬಸವನ ಬಾಗೇವಾಡಿ-17, ಇಂಡಿ-27, ದೇವರ ಹಿಪ್ಪರಗಿ-17, ಸಿಂದಗಿ-21, ಬಬಲೇಶ್ವರ-21, ನಾಗಠಾಣ ಮೀಸಲು ಕ್ಷೇತ್ರ-25.

ಪ್ರತಿಕ್ರಿಯಿಸಿ (+)