ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ಕ್ಕೆ ರಾಜ್ಯಮಟ್ಟದ ಶ್ವಾನ ಪ್ರದರ್ಶನ

Last Updated 13 ಡಿಸೆಂಬರ್ 2012, 7:02 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗ ಕೆನಲ್ ಕ್ಲಬ್ ಡಿ.16ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕುವೆಂಪು ರಂಗಮಂದಿರದ ಹಿಂಭಾಗದ ಎನ್‌ಇಎಸ್ ಮೈದಾನದಲ್ಲಿ ಏರ್ಪಡಿಸಿದೆ.
ವಿವಿಧ ತಳಿಯ 200ರಿಂದ 250 ಶ್ವಾನ ರಾಜ್ಯದಾದ್ಯಂತ ಆಗಮಿಸುತ್ತಿವೆ. ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶ್ವಾನ ಪ್ರದರ್ಶನ ಉದ್ಘಾಟಿಸುವರು. ಯುವ ಉದ್ಯಮಿ ಕೆ.ಎಸ್. ಕಾಂತೇಶ್, ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ  ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕ್ಲಬ್ ಅಧ್ಯಕ್ಷ ಎನ್. ರಾಜೇಂದ್ರ ಕಾಮತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆ ಕಾರ್ಯಕ್ರಮದ ನಂತರ ಬೆಳಿಗ್ಗೆ 10.30ಕ್ಕೆ ತರಬೇತಿ ಪಡೆದ ಪೊಲೀಸ್ ಶ್ವಾನಗಳಿಂದ ಆಕರ್ಷಕ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ವೇಳೆ ಪಶುವೈದ್ಯ ಡಾ.ಓ.ಎಸ್. ಪ್ರಕಾಶ್, ಉರಗ ತಜ್ಞ ಸ್ನೇಕ್ ಕಿರಣ್ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.

ವಿಜೇತ ಶ್ವಾನಗಳಿಗೆ ಒಟ್ಟುರೂ 30ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಮೊದಲನೆಯ ಬಹುಮಾನರೂ 10ಸಾವಿರ, ದ್ವಿತೀಯರೂ 5ಸಾವಿರ ಹಾಗೂ ತೃತೀಯರೂ 3ಸಾವಿರ ಮತ್ತು ನಾಲ್ಕರಿಂದ ಎಂಟನೇ ಸ್ಥಾನದವರೆಗೂ ತಲಾರೂ 1 ಸಾವಿರ ಹಾಗೂ ಒಂದು ವರ್ಷದ ಒಳಗಿನ ನಾಯಿ ಮರಿಗೆ ಪ್ರಥಮರೂ 3 ಸಾವಿರ, ದ್ವಿತೀಯರೂ 2ಸಾವಿರ ಹಾಗೂ ತೃತೀಯರೂ 1ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಅತ್ಯುತ್ತಮವಾಗಿ ಶ್ವಾನಗಳನ್ನು ಪ್ರದರ್ಶಿಸಿದ ಇಬ್ಬರಿಗೆ ಬೆಸ್ಟ್ ಹ್ಯಾಂಡ್ಲರ್ ಪ್ರಶಸ್ತಿ ಮತ್ತು ನಗದು ಬಹುಮಾನ. 15 ವರ್ಷದ ಒಳಗಿನ ಮಕ್ಕಳಿಗೆ ಜೂನಿಯರ್ ಹ್ಯಾಂಡ್ಲಿಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಕರ್ನಾಟಕದ ಹೆಮ್ಮೆಯ ಮುದೋಳ್ ತಳಿಯ ಶ್ವಾನಗಳಿಗೆ ಉಚಿತ ಪ್ರವೇಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ಶ್ವಾನಗಳಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದರು.

ಬಹುಮಾನ ವಿತರಣೆಯು ಅಂದು ಸಂಜೆ 5ರಿಂದ 6ರವರೆಗೆ ನಡೆಯಲಿದೆ. ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಿ.ಎಸ್. ಅರುಣ್ ಬಹುಮಾನ ವಿತರಣೆ ನೆರವೇರಿಸುವರು ಎಂದರು.

ಈ ಶ್ವಾನ ಪ್ರದರ್ಶನಕ್ಕೆ ಬೆಂಗಳೂರಿನಿಂದ ತೀರ್ಪುಗಾರರಾಗಿ ಲಾಲ್‌ರಾಜ್ ಶ್ರೀಧರನ್, ವೀಕ್ಷಕ ವಿವರಣಾಕಾರರಾಗಿ ಭಗವಾನ್ ಆಗಮಿಸುವರು. ಪ್ರವೇಶ ಶುಲ್ಕರೂ 200 ನಿಗದಿಪಡಿಸಲಾಗಿದೆ. ನೋಂದಣಿಗೆ ಡಿ. 15 ಕಡೆ ದಿನಾಂಕ. ಭಾಗವಹಿಸುವವರು ಪ್ರದರ್ಶನದಂದು ಬೆಳಿಗ್ಗೆ 9ಕ್ಕೆ ತಮ್ಮ ಶ್ವಾನಗಳೊಂದಿಗೆ ಮೈದಾನದಲ್ಲಿ ಹಾಜರಿರಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಗೌರವಾಧ್ಯಕ್ಷ ಕೆ.ಇ. ಕಾಂತೇಶ್, ಉಪಾಧ್ಯಕ್ಷ ಜಿ. ಅನಿಲ್‌ಕುಮಾರ್, ಗೌರವ ಕಾರ್ಯದರ್ಶಿ ಬಿ.ಎಸ್. ರಾಜೇಶ್, ಖಜಾಂಚಿ ಬಿ. ಶ್ರೀಧರ್ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT