ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಿಂದ ರಾಗ ವೈಭವ ಆರಂಭ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದ ಆಶ್ರಯದಲ್ಲಿ ಇದೇ 16ರಿಂದ 23ರವರೆಗೆ `43ನೇ ಸಂಗೀತ ಸಮ್ಮೇಳನ~ ನಡೆಯಲಿದೆ. ಸಂಗೀತ ವಿದ್ವಾನ್ ಡಾ.ನೇದನೂರಿ ಕೃಷ್ಣಮೂರ್ತಿ ಅವರು ಈ ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.

`ಗಾಯನ ಸಮಾಜವು106 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಬಾರಿಯ 43ನೇ ಸಂಗೀತ ಸಮ್ಮೇಳನಕ್ಕೆ ನೇದನೂರಿ ಕೃಷ್ಣಮೂರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ~ ಎಂದು ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಜ್ಞಾನನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರ ಅವರು ಇದೇ 16ರಂದು ಬೆಳಿಗ್ಗೆ 10 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಸವರಾಜು ಇತರರು ಭಾಗವಹಿಸಲಿದ್ದಾರೆ~ ಎಂದರು.

`ಸಮ್ಮೇಳನದ ಮುಖ್ಯ ವಿಷಯವಾದ `ರಾಗ ವೈಭವ~ ಕುರಿತು 17ರಿಂದ 22ರವರೆಗೆ ನಿತ್ಯ ಬೆಳಿಗ್ಗೆ 10ರಿಂದ 12ರವರೆಗೆ ಗೋಷ್ಠಿಗಳು ನಡೆಯಲಿವೆ. ಸಂಗೀತ ಶಾಸ್ತ್ರ ಕುರಿತು ಭಾಷಣಗಳು, ಪ್ರಾತ್ಯಕ್ಷಿಕೆ ಪ್ರದರ್ಶನ, ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ವಿದ್ವಾಂಸರಾದ ಎಂ.ಎಸ್.ಶೀಲಾ, ಸುಮಾ ಸುಧೀಂದ್ರ, ಮಲ್ಲಾಡಿ ಸಹೋದರರು ಸೇರಿದಂತೆ ಹಲವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ~ ಎಂದು ಹೇಳಿದರು.

ಪ್ರತಿದಿನ ಸಂಜೆ 4.15ರಿಂದ 5.45ರವರೆಗೆ ಉದಯೋನ್ಮುಖ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇದೇ 23ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ನೇದನೂರಿ ಕೃಷ್ಣಮೂರ್ತಿ ಅವರಿಗೆ `ಸಂಗೀತ ಕಲಾರತ್ನ~ ಬಿರುದು ನೀಡಿ ಸನ್ಮಾನಿಸಲಿದ್ದಾರೆ ಎಂದು ವಿವರಿಸಿದರು.

ಹಾಗೆಯೇ ಪದ್ಮಭೂಷಣ ಆರ್.ಕೆ. ಶ್ರೀಕಂಠನ್ ಅವರನ್ನು ಸನ್ಮಾನಿಸಲಾಗುವುದು. ಜತೆಗೆ ಎಂಟು ಮಂದಿಗೆ ವರ್ಷದ ಕಲಾವಿದರು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT