ಶನಿವಾರ, ಜನವರಿ 18, 2020
21 °C

17ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಮನಗೂಳಿ-–ದೇವಾಪೂರ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಿ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಉಪವಾಸ ಸತ್ಯಾಗ್ರಹವು ಗುರುವಾರಕ್ಕೆ 17 ದಿನಕ್ಕೆ ಕಾಲಿಟ್ಟಿದೆ.ಪಟ್ಟಣದ ಟೇಲರ್‌  ಮಾಲೀಕರು ಹಾಗೂ ಕಾರ್ಮಿಕರ  ಸಂಘದವರು ಪ್ರತಿಭಟನೆ ಮಾಡಿದರು. ಗಿರೀಶ ರಾಂಪೂರೆ, ಹೋರಾಟ ಸಮಿತಿಯ ಅಧ್ಯಕ್ಷ ಧಶರಥಸಿಂಗ್ ಮನಗೂಳಿ, ಆರ್.ಎಸ್.ಪಾಟೀಲ ಕೂಚಬಾಳ, ಕಾಶಿನಾಥ ಮುರಾಳ, ವೀರೇಶ ಕೋರಿ, ರಾಮನಗೌಡ ಬಾಗೇವಾಡಿ, ಬಾಬು ಬಡಗಣ, ತಿರುಪತಿ ನವಲೆ, ಸೂಫಿಖಾನ ಪಠಾಣ, ಆರಾಧನಾ ಟೇಲರ್, ಕೃಪಾ ಟೇಲರ್,ರತನ ಟೇಲರ್, ಸುಟ್ಸೇಟ್ ಟೇಲರ್, ರಾಜು ಟೇಲರ್, ಸುಪರ್ ಟೇಲರ್, ನಾಜರೋ ಟೇಲರ್, ಧಾರವಾಡ ಟೇಲರ್, ಪೂಣಾ ಟೇಲರ್, ಗೋವಿಂದ ಟೇಲರ್, ರವಿ ಟೇಲರ್, ಸಾಯಿ ಟೇಲರ್, ಆನಂದ ಗಾರ್ಮೆಂಟ್ಸ್‌  ಪ್ರವೀಣ ಟೇಲರ್, ಮಿಸ್ಬಾ ಲೇಡಿಸ್ ಟೇಲರ್, ತೆಗ್ಗಿನಮನಿ ಟೇಲರ್, ರಫೀಕ ಟೇಲರ್, ಮಾಡರ್ನ್‌್ ಟೇಲರ್ ಸೇರಿದಂತೆ ಇತರರು ಇದ್ದರು.

ಪ್ರತಿಕ್ರಿಯಿಸಿ (+)