17ನೇ ಮಗುವಿನ ನಿರೀಕ್ಷೆಯಲ್ಲಿ ‘ಮಹಾ ತಾಯಿ’

7

17ನೇ ಮಗುವಿನ ನಿರೀಕ್ಷೆಯಲ್ಲಿ ‘ಮಹಾ ತಾಯಿ’

Published:
Updated:

ಲಂಡನ್‌ (ಪಿಟಿಐ):  ಇದು ಅಪರೂ­ಪವಾದರೂ ಸತ್ಯ. ಬ್ರಿಟನ್‌ನ ಅತಿ ದೊಡ್ಡ ಕುಟುಂಬ ಈಗ ಮತ್ತೊಬ್ಬ ಅತಿಥಿಯ ಸೇರ್ಪಡೆಯ ಖುಷಿಯಲ್ಲಿದೆ.ಸೂಪರ್‌ ಮದರ್‌ ಖ್ಯಾತಿಯ ಸೂ ರಾಡ್‌ಫೋರ್ಡ್ ಹಾಗೂ ತಂದೆ ಬಾಕರ್‌ ಏಪ್ರಿಲ್‌ನಲ್ಲಿ ತಮ್ಮ  17 ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ 16ನೇ ಮಗುವಿಗೆ ಈಗ ಕೇವಲ 11 ತಿಂಗಳು. 23 ವರ್ಷಗಳಿಂದ ಪ್ರತಿ 17 ತಿಂಗಳಿ­ಗೊಮ್ಮೆ ಇವರು ಮಕ್ಕಳನ್ನು ಹೆರುತ್ತಿದ್ದಾರೆ ಎಂದು ‘ಡೇಲಿ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.2011 ರ ‘15 ಕಿಡ್ಸ್‌ ಎಂಡ್‌ ಕೌಂಟಿಂಗ್‌’ ಸಾಕ್ಷ್ಯಚಿತ್ರದ ಮೂಲಕ ಈ ಕುಟುಂಬ ಚಿರಪರಿಚಿತವಾಗಿತ್ತು.ರಾಡ್‌ಫೋರ್ಡ್‌ ಕುಟುಂಬ ತಮ್ಮ ಮನೆಯಲ್ಲಿ 9 ಕೊಠಡಿ ಹೊಂದಿದ್ದು, ತಮ್ಮದೇ ಸ್ವಂತ ಬೇಕರಿಯಲ್ಲಿ ಕೆಲಸ ಮಾಡುತ್ತದೆ. ಪ್ರಯಾಣ ಮಾಡ­ಬೇಕಾದರೆ ಮಿನಿ ಬಸ್‌ ಬಳಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry